ಮನೆ ಸುದ್ದಿ ಜಾಲ ‘ಪಹಲ್ಗಾಮ್’ ಮಾದರಿಯ ದಾಳಿ – ಕಲ್ಮಾ ಪಠಿಸದ ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ

‘ಪಹಲ್ಗಾಮ್’ ಮಾದರಿಯ ದಾಳಿ – ಕಲ್ಮಾ ಪಠಿಸದ ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ

0

ಮುಂಬೈ : ಮೀರಾ ರಸ್ತೆಯಲ್ಲಿ ಇಂದು (ಏ.28) ಮುಂಜಾನೆ ಪಹಲ್ಗಾಮ್‌ ಮಾದರಿಯ ದಾಳಿ ನಡೆದಿದೆ. ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹಿಂದುಗಳು ಕಲ್ಮಾ ಪಠಿಸದೇ ಇದ್ದಿದ್ದಕ್ಕೆ ದುಷ್ಕರ್ಮಿಯೊಬ್ಬ ಚಾಕು ಇರಿದಿದ್ದಾನೆ. ಚಾಕು ಇರಿಯುವ ಮುನ್ನ ಧರ್ಮ ಕೇಳಿ, ಕಲ್ಮಾ ಪಠಿಸಲು ಸೂಚಿಸಿದ್ದ ಎಂದು ವರದಿಯಾಗಿದೆ.

ಚಾಕು ಇರಿತಕ್ಕೊಳಗಾದವರನ್ನು ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋತೋ ರಮೇಶ್ ಸೇನ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ಜೈಬ್ ಜುಬೈರ್ ಅನ್ಸಾರಿ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಕೇವಲ ಒಂದೂವರೆ ಗಂಟೆಯೊಳಗೆ ಆತನನ್ನು ಬಂಧಿಸಲಾಗಿದೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮುಂಬೈನ ನಯಾ ನಗರ ಪೊಲೀಸ್ ಠಾಣೆ ಪ್ರದೇಶದ ವೋಕ್‌ಹಾರ್ಡ್ ಆಸ್ಪತ್ರೆಯ ಹಿಂಭಾಗದಲ್ಲಿರುವ ಅಸ್ಮಿತಾ ಗ್ರ್ಯಾಂಡ್ ಮ್ಯಾನ್ಷನ್ ಸ್ಥಳದಲ್ಲಿ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋತೋ ಸೇನ್ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಈ ವೇಳೆ, ದುಷ್ಕರ್ಮಿ ಜೈಬ್ ಜುಬೈರ್ ಅನ್ಸಾರಿ ಸ್ಥಳಕ್ಕೆ ಬಂದು ಇಬ್ಬರ ಜೊತೆ ಮಾತನಾಡುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಚಾಕುವನ್ನು ಹೊರತೆಗೆದು ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ರಾಜ್‌ಕುಮಾರ್ ಮಿಶ್ರಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಬ್ರೋತೋ ಸೇನ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕ ಸಂಜಯ್ ನಿರುಪಮ್, ಆರೋಪಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಈ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಬೇಕು. ಯಾವುದೇ ಶಂಕಿತ ಸಂಪರ್ಕಗಳ ಬಗ್ಗೆ ಸೂಕ್ತ ತನಿಖೆ ಮಾಡಬೇಕು. ಇಂತಹ ಘಟನೆಗಳು ದೇಶದಲ್ಲಿ ಮರುಕಳಿಸಲು ಬಿಡಬಾರದು ಎಂದಿದ್ದಾರೆ.