ಮನೆ ಅಪರಾಧ ನಿಗದಿತ ಸಮಯ ಮೀರಿ ಪಬ್ ನಲ್ಲಿ ಪಾರ್ಟಿ: ಟಾಲಿವುಡ್ ನಟಿ ಸೇರಿ 144 ಜನರ ಬಂಧನ

ನಿಗದಿತ ಸಮಯ ಮೀರಿ ಪಬ್ ನಲ್ಲಿ ಪಾರ್ಟಿ: ಟಾಲಿವುಡ್ ನಟಿ ಸೇರಿ 144 ಜನರ ಬಂಧನ

0

ಹೈದರಾಬಾದ್: ನಿಗದಿತ ಸಮಯವನ್ನು ಮೀರಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪದ ಮೇರೆಗೆ ಟಾಲಿವುಡ್ ನಟ ನಾಗ ಬಾಬು ಅವರ ಪುತ್ರಿ ಮತ್ತು ನಟಿ ನಿಹಾರಿಕಾ ಕೊನಿಡೇಲಾ ಹಾಗೂ ಗಾಯಕ ರಾಹುಲ್ ಸಿಪ್ಲಿಗುಂಜ್ ಸೇರಿದಂತೆ 144 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಐಷಾರಾಮಿ ಬಂಜಾರಾ ಹಿಲ್ಸ್‌ನಲ್ಲಿರುವ ರಾಡಿಸನ್ ಬ್ಲು ಹೋಟೆಲ್‌ನ ಪಬ್‌ ಮೇಲೆ ಮುಂಜಾನೆ 3 ಗಂಟೆ ಸುಮಾರಿಗೆ ಹೈದರಾಬಾದ್ ಸಿಟಿ ಪೊಲೀಸ್‌ನ ಟಾಸ್ಕ್ ಫೋರ್ಸ್ ಸಿಬ್ಬಂದಿ ದಾಳಿ ನಡೆಸಿದ್ದು, ಹೋಟೆಲ್ ಆವರಣದಲ್ಲಿ ಕೊಕೇನ್ ಸೇರಿ ಇತರೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಪಾರ್ಟಿ ಮಾಡುತ್ತಿದ್ದವರಲ್ಲಿ ಆಂಧ್ರಪ್ರದೇಶ ಪೊಲೀಸ್‌ನ ಮಾಜಿ ಮಹಾನಿರ್ದೇಶಕರ ಪುತ್ರಿ ಮತ್ತು ತೆಲುಗು ದೇಶಂ ಪಕ್ಷಕ್ಕೆ ಸೇರಿದ ಸಂಸದರ ಪುತ್ರ ಹಾಗೂ ಇತರೆ ಪ್ರಸಿದ್ಧ ವ್ಯಕ್ತಿಗಳ ಮಕ್ಕಳು ಸೇರಿದ್ದಾರೆ. ದಾಳಿಯ ವೇಳೆ ಪಾರ್ಟಿಯಲ್ಲಿ ಭಾಗವಹಿಸಿದ್ದವರು ಎಸೆದಿದ್ದ ಕೆಲವು ಕೊಕೇನ್ ಪಟ್ಟಣಗಳು ಲಭ್ಯವಾಗಿವೆ. ಪಾರ್ಟಿಯಲ್ಲಿದ್ದವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಬಂಧಿತರಲ್ಲಿ 33 ಮಹಿಳೆಯರು ಮತ್ತು ಪಬ್‌ನ ಕೆಲವು ಸಿಬ್ಬಂದಿ ಸೇರಿದ್ದಾರೆ.

ಅನಗತ್ಯ ಊಹಾಪೋಹ ಹಬ್ಬಿಸದಿರಿ:

ಮಗಳ ಬಂಧನ ಕುರಿತು ನಾಗಬಾಬು ಅವರು ವಿಡಿಯೊ ಹೇಳಿಕೆ ನೀಡಿದ್ದು, ‘ಪಾರ್ಟಿಯಲ್ಲಿ ಹಾಜರಿದ್ದ ತಮ್ಮ ಪುತ್ರಿ ನಿಹಾರಿಕ ಅವರು ಯಾವುದೇ ತಪ್ಪು ಮಾಡಿಲ್ಲ. ಆಕೆಯದ್ದು ತಪ್ಪಿಲ್ಲ ಎಂಬುದನ್ನು ಪೊಲೀಸರು ಕೂಡ ಸ್ಪಷ್ಟಪಡಿಸಿದ್ದಾರೆ. ನಮ್ಮ ಮನಸಾಕ್ಷಿಗೆ ಅದು ತಿಳಿದಿದೆ’. ಸಾಮಾಜಿಕ ಮಾಧ್ಯಮಗಳು ಅಥವಾ ಇತರೆ ಯಾವುದೇ ಮಾಧ್ಯಮಗಳ ಮೂಲಕ ತಮ್ಮ ಪುತ್ರಿ ನಿಹಾರಿಕ ಬಗ್ಗೆ ಯಾವುದೇ ರೀತಿಯ ‘ಅನಗತ್ಯ ಊಹಾಪೋಹಗಳನ್ನು’ ಹಬ್ಬಿಸದಂತೆ ಮನವಿ ಮಾಡಿದ್ದಾರೆ.

ಹಿಂದಿನ ಲೇಖನದೇವನೂರು ಮಹಾದೇವ ನೇತೃತ್ವದಲ್ಲಿ ಮುಸ್ಲಿಂರ ಅಂಗಡಿಯಿಂದ ಮಾಂಸ ಖರೀದಿ
ಮುಂದಿನ ಲೇಖನ12ನೇ ಬಾರಿ ಏರಿಕೆಯಾದ ತೈಲ ದರ