ಮನೆ ಮನರಂಜನೆ ಸಿದ್ದಿ ಸಹೋದರಿಯರ ಹಾಡಿಗೆ ಹೆಜ್ಜೆ ಹಾಕಿದ ಪ್ರಿಯಾಂಕ

ಸಿದ್ದಿ ಸಹೋದರಿಯರ ಹಾಡಿಗೆ ಹೆಜ್ಜೆ ಹಾಕಿದ ಪ್ರಿಯಾಂಕ

0

ನಟಿ ಪ್ರಿಯಾಂಕ ಉಪೇಂದ್ರ ನಟನೆಯ, ಗುರುಮೂರ್ತಿ ನಿರ್ದೇಶನದ ‘ಉಗ್ರಾವತಾರ’ ಸಿನಿಮಾದ ಹಾಡೊಂದಕ್ಕೆ ಸಿದ್ದಿ ಸಹೋದರಿಯರು (ಗಿರಿಜಾ ಹಾಗೂ ಗೀತಾ)  ಧ್ವನಿಯಾಗಿದ್ದು, ಪ್ರಿಯಾಂಕ ಅವರೂ ಹೆಜ್ಜೆ ಹಾಕಿದ್ದಾರೆ.

ನಟ ಉಪೇಂದ್ರ ಅವರು ಇತ್ತೀಚೆಗೆ ಈ ಹಾಡನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಪ್ರಿಯಾಂಕ ಮಾತನಾಡಿ, ಈ ಪಾತ್ರವನ್ನು ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆ ಕಾಡಿತ್ತು. ಸವಾಲಾಗಿ ಇದನ್ನು ತೆಗೆದುಕೊಂಡೆ. ಡ್ಯೂಪ್ ಬಳಸದೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದೇನೆ. ಅದಕ್ಕಾಗಿ ತರಬೇತಿಯನ್ನೂ ಪಡೆದಿದ್ದೆ. ಮಹಿಳೆಯರು ಶೋಷಣೆಗೆ ಒಳಗಾಗಿ, ಯಾವೆಲ್ಲಾ ಸಮಸ್ಯೆ ಎದುರಿಸುತ್ತಿದ್ದಾರೆ ಹಾಗೂ ಅವರ ರಕ್ಷಣೆಗೆ ನಿಂತ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದರು.

ಹಿಂದಿನ ಲೇಖನಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನೇ ಕೊಂದ ಪತಿ
ಮುಂದಿನ ಲೇಖನಹೈದಾರಾಬಾದ್‌ನ ಕಾಲೇಜಿನ ಲ್ಯಾಬ್‌’ನಲ್ಲಿ ರಾಸಾಯನಿಕ ಅನಿಲ ಸೋರಿಕೆ: 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ