ಮನೆ ರಾಜ್ಯ ರಾಯಚೂರು: ಡಾ.ಭಾಲ್ಕಿ ಆಸ್ಪತ್ರೆ ಕಟ್ಟಡದಲ್ಲಿ ಬೆಂಕಿ- ರೋಗಿಗಳ ಸ್ಥಳಾಂತರ

ರಾಯಚೂರು: ಡಾ.ಭಾಲ್ಕಿ ಆಸ್ಪತ್ರೆ ಕಟ್ಟಡದಲ್ಲಿ ಬೆಂಕಿ- ರೋಗಿಗಳ ಸ್ಥಳಾಂತರ

0

ರಾಯಚೂರು: ನಗರದ ಗೋಶಾಲೆ ರಸ್ತೆಯಲ್ಲಿರುವ ಡಾ.ಭಾಲ್ಕಿ ಆಸ್ಪತ್ರೆ ಕಟ್ಟಡದಲ್ಲಿ ಕಳೆದ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದರಿಂದ ರೋಗಿಗಳನ್ನು ತಕ್ಷಣವೇ ಬೇರೆಡೆ ಸ್ಥಳಾಂತರ ಮಾಡಲಾಯಿತು. ಆಸ್ಪತ್ರೆ ಕೆಳಗಿರುವ ಟೈಲ್ಸ್ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು, ಹೊಗೆ ಆಸ್ಪತ್ರೆಯನ್ನೂ ಆವರಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತುಕೊಂಡ ಸಿಬ್ಬಂದಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸುಮಾರು 10 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

ಟೈಲ್ಸ್ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಆಸ್ಪತ್ರೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಅವಘಡಕ್ಕೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಘಟನಾ ಸ್ಥಳ ಸದರ್‌ಬಜಾರ್ ಠಾಣೆ ವ್ಯಾಪ್ತಿಯಲ್ಲಿದೆ.

ಆಸ್ಪತ್ರೆ ಕೆಳಗಿರುವ ಟೈಲ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನಮ್ಮ ವೈದ್ಯರು 10 ಮಂದಿ ರೋಗಿಗಳನ್ನು ಕೂಡಲೇ ಬೇರೆಡೆ ಶಿಫ್ಟ್ ಮಾಡಿದರು. ಎಲ್ಲಾ ರೋಗಿಗಳನ್ನು ಕಳುಹಿಸಿದ ನಂತರ ವೈದ್ಯರು ಹೊರ ಬಂದಿದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲ. ಎಲ್ಲ ರೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ವೈದ್ಯ ಡಾ.ನಾಗರಾಜ ಭಾಲ್ಕಿ ಪ್ರತಿಕ್ರಿಯಿಸಿದರು.

ಹಿಂದಿನ ಲೇಖನಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ: ಐವರ ಬಂಧನ
ಮುಂದಿನ ಲೇಖನಮಂಡ್ಯದ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ: ಸುಮಲತಾ ಅಂಬರೀಶ್