ಮನೆ ಮನರಂಜನೆ ಡಿ.27ಕ್ಕೆ ‘ರಾಜು ಜೇಮ್ಸ್‌ ಬಾಂಡ್‌’ ರಿಲೀಸ್

ಡಿ.27ಕ್ಕೆ ‘ರಾಜು ಜೇಮ್ಸ್‌ ಬಾಂಡ್‌’ ರಿಲೀಸ್

0

ಕೊನೆಗೂ “ರಾಜು ಜೇಮ್ಸ್‌ ಬಾಂಡ್‌’ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಬಂದಿದೆ. ಚಿತ್ರವನ್ನು ಡಿಸೆಂಬರ್‌ 27ರಂದು ತೆರೆಗೆ ತರಲು ಚಿತ್ರತಂಡ ಮುಂದಾಗಿದೆ.

Join Our Whatsapp Group

ಇದರ ಮೊದಲ ಹಂತವಾಗಿ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಿದೆ ತಂಡ. ಗುರುನಂದನ್‌ ಈ ಸಿನಿಮಾದ ನಾಯಕರಾಗಿದ್ದು, ಮಂಜುನಾಥ್‌ ವಿಶ್ವಕರ್ಮ, ಕಿರಣ್‌ ಭರ್ತೂರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ನೋಡುಗನಿಗೆ ಯಾವುದೇ ಅಶ್ಲೀಲ ಸಂಭಾಷಣೆ ಇಲ್ಲದ ಪರಿಶುದ್ಧ ಮನರಂಜನೆ ನೀಡುತ್ತದೆ. ಎರಡು ಕಾಲು ಗಂಟೆಗಳ ಚಿತ್ರದಲ್ಲಿ ಮಕ್ಕಾಲು ಗಂಟೆ ನೀವು ನಗುವಿಗೆ ಮೀಸಲಿಡಬೇಕು.

ರವಿಶಂಕರ್‌, ಚಿಕ್ಕಣ್ಣ,  ಸಾಧುಕೋಕಿಲ, ಅಚ್ಯುತ ಕುಮಾರ್‌, ಜೈಜಗದೀಶ್‌ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಮೃದುಲಾ ಈ ಚಿತ್ರದ ನಾಯಕಿ.

ಕನ್ನಡ ಹಾಗೂ ಹಿಂದಿ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರ ಬಿಡುಗಡೆಯಾಗುತ್ತಿದೆ ಎನ್ನುವುದು ಚಿತ್ರದ ಬಗ್ಗೆ ತಂಡ ನೀಡುವ ಮಾಹಿತಿ.

ನಗುವೇ ಪ್ರಧಾನವಾಗಿರುವ ಈ ನಮ್ಮ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಿದೆ. ನೋಡುಗರು ಕೊಟ್ಟ ದುಡ್ಡಿಗೆ ಮೋಸ ಮಾಡದ ಸಿನಿಮಾವಿದು ಎಂದು ಧೈರ್ಯವಾಗಿ ಹೇಳುತ್ತೇವೆ. ಕನ್ನಡದ ಜೊತೆಗೆ ಹಿಂದಿಯಲ್ಲೂ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ ಎನ್ನುವುದು ನಿರ್ಮಾಪಕರಾದ ಮಂಜುನಾಥ್‌ ವಿಶ್ವಕರ್ಮ ಹಾಗೂ ಕಿರಣ್‌ ಭರ್ತೂರು ಮಾತು.

“ನನ್ನ ಹೆಸರು ಎಷ್ಟೋ ಜನಕ್ಕೆ ಗೊತ್ತಿಲ್ಲ. ಫ‌ಸ್ಟ್‌ ರ್‍ಯಾಂಕ್‌ ರಾಜು ಅಂತಲೇ ಹೋದ ಕಡೆಯಲ್ಲೆಲ್ಲಾ ಗುರುತಿಸುತ್ತಾರೆ. ಈ ಚಿತ್ರದ ನಿರ್ದೇಶಕರು ನನ್ನ ಹಿಂದಿನ ಜಾನರ್‌ಗೆ ಬ್ರೇಕ್‌ ಹಾಕಿದ್ದಾರೆ. ನನ್ನ ಕೈಯಲ್ಲಿ ಡ್ಯಾನ್ಸ್‌ , ಆ್ಯಕ್ಷನ್‌ ಮಾಡಿಸಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದ ಹಾಗೆ ಸಿನಿಮಾ ಮಾಡಿದ್ದಾರೆ’ ಎನ್ನುತ್ತಾರೆ ನಾಯಕ ಗುರು ನಂದನ್‌.