ಮನೆ ಅಪರಾಧ 2 ವರ್ಷದ ಮಗುವಿನ ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ

2 ವರ್ಷದ ಮಗುವಿನ ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ

0

ರಾಮನಗರ (Ramanagara)-ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.

ಸ್ವಂತ ದೊಡ್ಡಪ್ಪನೇ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಜೂ.2 ರಂದು ಕೋಟೆ ನಿವಾಸಿ ಮುಸ್ತಾನ ಹಾಗೂ ಮೊಹಮ್ಮದ್ ಇರ್ಫಾನ್ ದಂಪತಿಯ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಅತ್ಯಾಚಾರ ಎಸಗಿದ ಮಗುವಿನ ದೊಡ್ಡಪ್ಪನನ್ನು 28 ವರ್ಷ ವಯಸ್ಸಿನ ಸಾದಿರ್ ಪಾಷಾ ಎಂದು ಗುರುತಿಸಲಾಗಿದೆ.

ಚಾಕೋಲೇಟ್ ಕೊಡಿಸುವುದಾಗಿ ಮಗುವನ್ನು ಸಾದಿರ್ ಪಾಷಾ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಎಂದು ತಿಳಿದು ಬಂದಿದೆ. ತಡ ರಾತ್ರಿ ಆದರೂ ಮಗುವನ್ನು ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಗುವನ್ನು ವಾಪಸ್ ಮನೆಗೆ ಕರೆದುಕೊಂಡು ಬರುವಂತೆ ಹೇಳಿದ್ದರು. ರಾತ್ರಿ 12 ಘಂಟೆ ಸುಮಾರಿಗೆ ಆರೋಪಿ ಸಾದಿರ್ ಪಾಷಾ, ಮಗುವಿನ ಪೋಷಕರಾದ ಮುಸ್ತಾನ ಹಾಗೂ ಮೊಹಮ್ಮದ್ ಇರ್ಫಾನ್ ವಶಕ್ಕೆ ಮಗುವನ್ನು ಒಪ್ಪಿಸಿದ್ದಾನೆ.

ಈ ವೇಳೆ ಮಗುವಿನ ಬಟ್ಟೆಯಲ್ಲಿ ರಕ್ತದ ಕಲೆ, ಮೈ ಮೇಲೆ ಗಾಯಗಳು ಆಗಿರೋದನ್ನು ಕಂಡ ಗಾಬರಿಯಾಗಿದ್ದಾರೆ. ಕೂಡಲೇ ಪೋಷಕರು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಮಗುವಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಹಿಂದಿನ ಲೇಖನದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಸಚಿವ ಎಸ್.ಟಿ.ಸೋಮಶೇಖರ್ ಬಿರುಸಿನ ಪ್ರಚಾರ
ಮುಂದಿನ ಲೇಖನವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನವಾಗಿಲ್ಲ: ಬಿ.ವೈ.ವಿಜಯೇಂದ್ರ