ಮನೆ ಮನರಂಜನೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಟ್ರೇಲರ್ ಬಿಡುಗಡೆ

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಟ್ರೇಲರ್ ಬಿಡುಗಡೆ

0

ಕಡಲ ತೀರ, ಅಲ್ಲೊಂದು ಮುದ್ದಾದ ಪ್ರೇಮ, ಹಿತವಾದ ಅಲೆಗಳ ಹಿಂದಿನ ಕ್ರೂರತೆ.. ರಕ್ತ, ಜೈಲು, ಪ್ರೀತಿ ಮತ್ತು ಆ ಕಣ್ಣುಗಳು… ಇದು ಹೇಮಂತ್ ರಾವ್ ಅವರ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ತುಣುಕಿನಲ್ಲಿ ಕಂಡಿದ್ದು.

ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ರಕ್ಷಿತ್ ಶೆಟ್ಟಿ ಅವರ ಪರವಂ ಪಿಕ್ಷರ್ ನಲ್ಲಿ ನಿರ್ಮಾಣ ಮಾಡಿರುವ ಚಿತ್ರದ ರಚನೆ ಮತ್ತು ನಿರ್ದೇಶನ ಹೇಮಂತ್ ರಾವ್ ಅವರದ್ದು.

ಈ ಹಿಂದೆ ಗೋದಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಕವಲುದಾರಿ ಚಿತ್ರ ಮಾಡಿ ನವ ನಿರ್ದೇಶಕರ ಸಾಲಿನಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದ ಹೇಮಂತ್ ಅವರು ಇದೀಗ ಮನು ಮತ್ತು ಪ್ರಿಯಾರ ಲವ್ ಸ್ಟೋರಿ ಹೇಳಲು ಹೊರಟಿದ್ದಾರೆ. ಮನುವಿನ (ರಕ್ಷಿತ್ ಪಾತ್ರ) ಲವ್ ಸ್ಟೋರಿ ಮತ್ತು ಲೈಫ್ ಸ್ಟೋರಿಯನ್ನು ಕಡಲ ಅಲೆಗಳ ನಡುವೆ ಹೇಳುತ್ತಿದ್ದಾರೆ.

ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು, ಮೊದಲ ಭಾಗವು ಸೆಪ್ಟೆಂಬರ್ 1ರಂದು ಬಿಡುಗಡೆ ಕಾಣಲಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಜತೆಗೆ ಚೈತ್ರಾ ಜೆ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲ ಕೃಷ್ಣ ದೇಶಪಾಂಡೆ ಮತ್ತಿತರರಿದ್ದಾರೆ.

ಚಿತ್ರಕ್ಕೆ ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತವಿದೆ.

ಹಿಂದಿನ ಲೇಖನಮೈಸೂರು: ಚಿನ್ನದ ಸರ ಲಪಟಾಯಿಸಿದ್ದ ಖದೀಮನ ಬಂಧನ
ಮುಂದಿನ ಲೇಖನತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಟಿ ನರಸೀಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ಚಳವಳಿ: ರೈತರ  ಬಂಧನ, ಬಿಡುಗಡೆ