ಮನೆ ಸುದ್ದಿ ಜಾಲ ಮೈಸೂರಿನ ಸಿಎಫ್ ಟಿಆರ್ ಐನಲ್ಲಿ ‘ಸರ್ವಮಾನ್ಯವಿದು ವಿಜ್ಞಾನ’ ಮಹಾಹಬ್ಬ

ಮೈಸೂರಿನ ಸಿಎಫ್ ಟಿಆರ್ ಐನಲ್ಲಿ ‘ಸರ್ವಮಾನ್ಯವಿದು ವಿಜ್ಞಾನ’ ಮಹಾಹಬ್ಬ

0

ಮೈಸೂರು: `ಸರ್ವಮಾನ್ಯವಿದು ವಿಜ್ಞಾನ’ ಎಂಬ ರಾಷ್ಟ್ರಮಟ್ಟದ ವಿಜ್ಞಾನಹಬ್ಬದ ಅಂಗವಾಗಿ ಮೈಸೂರಿನ ಸಿಎಸ್‌ಐಆರ್‌-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಆವರಣದಲ್ಲಿ ವಿಜ್ಞಾನಿ ಸಾಧಕರು ಹಾಗೂ ಭಾರತದ ವೈಜ್ಞಾನಿಕ ಸಾಧನೆಗಳ ಪ್ರದರ್ಶನವು ನಡೆಯಲಿದೆ.

ಭಾರತವು ಸ್ವಾಂತಂತ್ರ್ಯಪಡೆದು 75 ವರ್ಷಗಳ ಸಂದಿರುವ ಸಂದರ್ಭದ ಆಚರಣೆಯ ಅಂಶವಾಗಿ ಈ ಮಹಾಹಬ್ಬವನ್ನು ಸರಕಾರದ ಸಂಸ್ಕೃತಿ ಇಲಾಖೆ ಹಾಗೂ ಪ್ರಧಾನ ವೈಜ್ಞಾನಿಕ ಸಲಹೆಗಾರರು ಫೆಬ್ರವರಿ 22-28ರ ಅವಧಿಯಲ್ಲಿ ಆಯೋಜಿಸಲಾಗಿದೆ.  ಒಮ್ಮೆಲೇ ದೇಶದ ೭೫ ಪಟ್ಟಣಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಗುಲ್ಬರ್ಗ ನಗರಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಮೈಸೂರಿನಲ್ಲಿ ಈ ಹಬ್ಬವನ್ನು ಸಿಎಸ್‌ಐಆರ್‌-ಸಿಎಫ್‌ಟಿಆರ್‌ಐ, ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಮೈಸೂರಿನ ಸ್ವಾಮಿವಿವೇಕಾನಂದ ಯೂಥ್‌ ಮೂವ್ಮೆಂಟ್‌ ಸಂಸ್ಥೆಗಳು, ನಗರದ ಇತರೆ ಶೈಕ್ಷಣಿಕ ಸಂಸ್ಥೆಗಳ ನೆರವಿನೊಂದಿಗೆ ಜಂಟಿಯಾಗಿ ಆಯೋಜಿಸಲಾಗುತ್ತಿದೆ. ಈ ಹಬ್ಬವನ್ನು ಸಿಎಸ್‌ಐಆರ್‌-ಸಿಎಫ್‌ಟಿಆರ್‌ಐನ ನಿರ್ದೇಶಕಿಯಾದ ಡಾ. ಶ್ರೀದೇವಿಸಿಂಗ್‌  ಇಂದು ಬೆಳಗ್ಗೆ ಗಂಟೆಗೆ  ಉದ್ಘಾಟಿಸಲಿರುವರು.

ಹಬ್ಬದಲ್ಲಿ  ವಸ್ತುಪ್ರದರ್ಶನ, ವಿಜ್ಞಾನ ವಿಷಯಗಳ ಕುರಿತ ವಿಶೇಷ ಉಪನ್ಯಾಸಗಳು, ಮಕ್ಕಳಿಗಾಗಿ ರಸಪ್ರಶ್ನೆ, ಪ್ರಯೋಗ ಚಟುವಟಿಕೆಗಳು, ಸಂಚಾರಿ ವಸ್ತುಪ್ರದರ್ಶನ, ವಿಜ್ಞಾನ ಪುಸ್ತಕಗಳ ಪ್ರದರ್ಶನ, ವಿಜ್ಞಾನ ಚಲನಚಿತ್ರಗಳ ಪ್ರದರ್ಶನವೇ ಮೊದಲಾದ ಕಾರ್ಯಕ್ರಮಗಳನ್ನು ಮೈಸೂರುನಗರ ಮತ್ತು ನೆರೆಹೊರೆಯ ಪಟ್ಟಣಗಳಲ್ಲಿ ನಡೆಸಲಾಗುವುದು.

ಮಹಾಹಬ್ಬವನ್ನು ರಾಷ್ಟ್ರಮಟ್ಟದಲ್ಲಿ ನವದೆಹಲಿಯ ವಿಜ್ಞಾನ ಪ್ರಸಾರ್‌ ಹಾಗೂ ರಾಜ್ಯಮಟ್ಟದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಸಂಯೋಜಿಸುತ್ತಿವೆ.

ಹೆಚ್ಚಿನ ವಿವರಗಳಿಗೆ ಶ್ರೀಶರ್ಮ, 9886640328, 9449120618 ಇವರನ್ನು ಸಂಪರ್ಕಿಸಬಹುದು.

ಹಿಂದಿನ ಲೇಖನಹಿಜಾಬ್‌, ಬುರ್ಕಾ ಕಳಚುವುದನ್ನು ಸೆರೆ ಹಿಡಿದು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ದ ನಿರ್ಬಂಧಕ್ಕೆ ಕೋರಿಕೆ
ಮುಂದಿನ ಲೇಖನಮೈಸೂರಿನಲ್ಲಿ ಮಾರ್ಚ್ 12 ರಂದು ಲೋಕ್ ಅದಾಲತ್