ಮನೆ ರಾಜ್ಯ ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಕಳಚಿದ ಇಂಜಿನ್- ತಪ್ಪಿದ ಭಾರಿ ಅನಾಹುತ

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಕಳಚಿದ ಇಂಜಿನ್- ತಪ್ಪಿದ ಭಾರಿ ಅನಾಹುತ

0

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನ ಇಂಜಿನ್ ಕಳಚಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಬಿದರೆ ಬಳಿ ನಡೆದಿದೆ.

Join Our Whatsapp Group

ತಾಳಗುಪ್ಪ- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿ ನಲ್ಲಿ ಈ ಘಟನೆ ನಡೆದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಎಕ್ಸ್ ಪ್ರೆಸ್ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಿತ್ತು. ಶಿವಮೊಗ್ಗ ಸಮೀಪದ ಬಿದರೆ ಬಳಿ ಬರುತ್ತಿದ್ದಂತೆ ಬೋಗಿಗಳಿಂದ ಇಂಜಿನ್ ಬೇರ್ಪಟ್ಟಿದೆ. ಕಪ್ಲಿಂಗ್ ಸಡಿಲಗೊಂಡ ಕಾರಣ ಬೋಗಿಗಳು ಮತ್ತು ಇಂಜಿನ್ ಬೇರೆ ಬೇರೆಯಾಗಿದೆ. ಬೋಗಿಗಳ ಬಿಟ್ಟು ಇಂಜಿನ್ ಸ್ವಲ್ಪ ದೂರ ಚಲಿಸಿದೆ.

ಬಿದರೆ ಬಳಿ ಸಮತಟ್ಟಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿಗಳು, ಸಮಸ್ಯೆ ಬಗೆಹರಿಸಿದರು. ಕೊನೆಗೆ ಬೆಂಗಳೂರು ಕಡೆಗೆ ರೈಲು ಹೊರಟಿತು.

ಹಿಂದಿನ ಲೇಖನಸಂಪುಟ ವಿಸ್ತರಣೆ ವಿಳಂಬವಾಗುತ್ತಿಲ್ಲ, ಪ್ರಕ್ರಿಯೆ ನಡೆಯುತ್ತಿದೆ: ಸಚಿವ ಡಾ.ಜಿ.ಪರಮೇಶ್ವರ್
ಮುಂದಿನ ಲೇಖನಉಪಲೋಕಾಯುಕ್ತರ ನೇಮಕಾತಿ ಕುರಿತ ಮಾಹಿತಿ ಕೋರಿಕೆ: ʼಆಂತರಿಕ ಕಚೇರಿಯ ಸಂವಹನ ಗೌಪ್ಯʼ ಎಂದು ಅರ್ಜಿ ವಜಾ; ಆದೇಶ ಕಾಯಂ