ಮನೆ ರಾಜಕೀಯ ಸಿದ್ದರಾಮಯ್ಯ ‘ಅಮೃತ ಮಹೋತ್ಸವ’: ಭರದಿಂದ ಸಾಗುತ್ತಿರುವ ಸಿದ್ದತೆ

ಸಿದ್ದರಾಮಯ್ಯ ‘ಅಮೃತ ಮಹೋತ್ಸವ’: ಭರದಿಂದ ಸಾಗುತ್ತಿರುವ ಸಿದ್ದತೆ

0

ಬೆಂಗಳೂರು(Bengaluru): ಆಗಸ್ಟ್‌ 3ರಂದು  ನಡೆಯಲಿರುವ ಸಿದ್ದರಾಮಯ್ಯ–75 ಅಮೃತ ಮಹೋತ್ಸವಕ್ಕೆ ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಅಮೃತ ಮಹೋತ್ಸವ ಸಮಿತಿ ಕಾರ್ಯಕ್ರಮದ ಯಶಸ್ವಿಗೆ ಅಗತ್ಯವಾದ ಯೋಜನೆಗಳಿಗೆ ಅಂತಿಮ ರೂಪು ಕೊಡುತ್ತಿದ್ದು, ಸಿದ್ದರಾಮಯ್ಯ ನಿವಾಸದಲ್ಲಿ ಹಲವು ಸಭೆಗಳನ್ನು ನಡೆಸಿದೆ. ವಿವಿಧ ವ್ಯವಸ್ಥೆಗಳ ಹೊಣೆಯನ್ನು ಬೇರೆ, ಬೇರೆ ನಾಯಕರಿಗೆ ವಹಿಸಲಾಗಿದೆ.

ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು, ನಾಲ್ಕು ಲಕ್ಷ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲು ಅಮೃತ ಮಹೋತ್ಸವ ಸಮಿತಿ ನಿರ್ಧರಿಸಿದೆ. ರಾಹುಲ್ ಗಾಂಧಿ ಮತ್ತಿತರ ಗಣ್ಯರು ಕಾರ್ಯಕ್ರಮಕ್ಕೆ ಬರಲು ಎರಡು ಹೆಲಿಪ್ಯಾಡ್‌ಗಳು ಸಿದ್ಧವಾಗುತ್ತಿದೆ.

ಊಟದ ವ್ಯವಸ್ಥೆ: ಐದು ಲಕ್ಷ ಮಂದಿಗೆ ಪಲಾವ್, ಮೊಸರನ್ನ ಮತ್ತು ಸಿಹಿ ತಿಂಡಿಯ ಭೋಜನ ವ್ಯವಸ್ಥೆ, ಆರು ಲಕ್ಷ ಮಂದಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಳೆ ಬಂದರೆ ಯಾವುದೇ ಸಮಸ್ಯೆ ಆಗದಂತೆ ಪೆಂಡಾಲ್ ವ್ಯವಸ್ಥೆ ಮಾಡಲಾಗುತ್ತಿದೆ.

ಕಾರ್ಯಕ್ರಮದ ವಿವರ: ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಮೊದಲು ಸಂಗೀತ ನಿರ್ದೇಶಕ ಹಂಸಲೇಖಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 12 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಇದು ಎರಡು ಗಂಟೆ ಕಾಲ ನಡೆಯಲಿದೆ. ಕಾರ್ಯಕ್ರಮದ ಸ್ಥಳದಲ್ಲಿ ಸಿದ್ದರಾಮಯ್ಯ ಅವರ ಕುರಿತಾದ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಹಿಂದಿನ ದಿನ (ಆ. 2ರ ರಾತ್ರಿ) ಲೇಸರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ ಎಂದು ಸಮಿತಿಯ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿನ ಸಾಧನೆಗಳನ್ನು ವಿವರಿಸುವ ಪುಸ್ತಕವೂ ಸೇರಿದಂತೆ ಮೂರು ಪುಸ್ತಕಗಳು ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ಕಾರ್ಯಕ್ರಮ ವೀಕ್ಷಣೆಗೆ ಅನುಕೂಲ ಆಗುವಂತೆ ಬೃಹತ್ ಎಲ್‌ಇಡಿ ಪರದೆಗಳನ್ನೂ ಅಳವಡಿಸಲಾಗುತ್ತಿದೆ.

ಹಿಂದಿನ ಲೇಖನಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ನಲ್ಲಿ 17 ಹುದ್ದೆಗಳು ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ
ಮುಂದಿನ ಲೇಖನವರ್ಗಾವಣೆ ಬೆದರಿಕೆ: ಹೈಕೋರ್ಟ್‌ನಿಂದ ನ್ಯಾ. ಸಂದೇಶ್‌ರಿಗೆ ಭದ್ರತೆ, ತನಿಖೆಗೆ ಎಸ್‌ಐಟಿ ರಚನೆ ಕೋರಿದ್ದ ಪಿಐಎಲ್‌ ವಜಾ