ಚಾಮರಾಜನಗರ: ಹಿಂದಿನ ಸರ್ಕಾರ ಪಠ್ಯ ಪುಸ್ತಕದಲ್ಲಿ ಭಾರಿ ಲೋಪ ಎಸಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಪಠ್ಯಪುಸ್ತಕ ಮರು ಪರಿಷ್ಕರಣೆ ನಿರ್ಧಾರಕ್ಕೆ ಬೆಂಬಲ ಸೂಚಿಸುವುದಾಗಿ ಸಾಹಿತಿ ಕುಂ. ವೀರಭದ್ರಪ್ಪ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ನಾವು ಯಾರನ್ನ ಸೋಲಿಸಬೇಕು ಅಂತ ಇಷ್ಟಪಟ್ಟಿದ್ವೋ ಅವರು ಸೋತಿದ್ದಾರೆ. ಯಾರು ಗೆಲ್ಲಬೇಕು ಅಂತ ಆಶಯ ಹೊಂದಿದ್ದೆವೋ ಅವರು ಗೆದ್ದು 135 ಸೀಟು ತೆಗೆದುಕೊಂಡಿದ್ದಾರೆ. ಕರ್ನಾಟಕ ಜನತೆಗೆ ಗೆಲ್ಲಿಸೋದು ಎಷ್ಟು ಗೊತ್ತೋ, ಸೋಲಿಸೋದು ಸಹ ಅಷ್ಟೇ ಗೊತ್ತು ಎಂದು ಹೇಳಿದ್ದಾರೆ.
ಬಿಜೆಪಿಯವರು ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ರು ಎಂದು ಟೀಕಿಸಿದ ಅವರು, ಅನೇಕ ಕಾರಣಗಳಿಗೆ ಚಾಮರಾಜನಗರ ನನಗೆ ಇಷ್ಟ ಆಗುತ್ತದೆ ಎಂದಿದ್ದಾರೆ. ಚಾಮರಾಜನಗರದಲ್ಲಿ ವಿ. ಸೋಮಣ್ಣ, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಹಿಂದಿನ ಸರ್ಕಾರ ಪಠ್ಯ ಪುಸ್ತಕದಲ್ಲಿ ಭಾರಿ ಲೋಪ ಎಸಗಿದೆ. ಕೆಲವು ಹುಸಿ ದೇಶ ಭಕ್ತರನ್ನು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡಿತ್ತು. ರೋಹಿತ್ ಚಕ್ರತೀರ್ಥ ಎಂಬ ಅಪಕ್ವ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿ ಮಾಡಿತ್ತು. ಅವರು ಮಾಡಿದ ತಪ್ಪನ್ನು ಸರಿಪಡಿಸಬೇಕು. ಹೊಸ ಪಠ್ಯಪುಸ್ತಕ ಜಾರಿಗೆ ತರಬೇಕು. ಬರಗೂರು ರಾಮಚಂದ್ರಪ್ಪ ಜಾರಿಗೆ ತಂದಿದ್ದ ಪುಸ್ತಕಗಳೇ ಮತ್ತೆ ಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಜೆಪಿಯವರು ಹೇಳೋದು ಭಾರತೀಯತೆ ಅಲ್ಲ, ಅವರು ಹೇಳೋದು ಹಿಂದುತ್ವ. ದೇಶದ ಎಲ್ಲರ ಹಿತಾಸಕ್ತಿ ಕಾಪಾಡೋದು ಭಾರತೀಯತೆ. ಬಿಜೆಪಿಯವರು ಹೇಳೋ ಭಾರತೀಯತೆ ಒಪ್ಪೋಕೆ ಸಾಧ್ಯವಿಲ್ಲ. ಬಿಜೆಪಿ ಅವ್ರು ಹೇಳೋದು ಆರ್ಎಸ್ಎಸ್ ಪ್ರಣೀತ ಭಾರತೀಯತೆ. ಅಂಬೇಡ್ಕರ್, ಗಾಂಧಿ ಆಶಯದ ಭಾರತೀಯತೆ ಅಲ್ಲ. ಹಳೇ ಪಠ್ಯಕ್ರಮವನ್ನು ಸರ್ಕಾರ ಜಾರಿಗೆ ತರಬೇಕು ಎಂದು ವೀರಭದ್ರಪ್ಪ ಆಗ್ರಹಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ್ದ ಪಠ್ಯ ಪರಿಷ್ಕರಣೆಗೆ ಪ್ರತಿಪಕ್ಷಗಳಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ರಾಜಕೀಯ ಆಯಾಮ ಪಡೆದುಕೊಂಡು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.