ಮನೆ ರಾಜ್ಯ ಎಸ್‌’ಯುವಿ ಕಾರು ಡಿಕ್ಕಿ: ಮಹಿಳೆ ಸಾವು

ಎಸ್‌’ಯುವಿ ಕಾರು ಡಿಕ್ಕಿ: ಮಹಿಳೆ ಸಾವು

0

ಮುಂಬೈ: ವಾಕಿಂಗ್ ಹೋಗಿದ್ದಾಗ ವೇಗವಾಗಿ ಬಂದ ಎಸ್‌’ಯುವಿ ಕಾರು ಡಿಕ್ಕಿ ಹೊಡೆದು ಪರಿಣಾಮ 39 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಭಾನುವಾರ ಬೆಳಿಗ್ಗೆ 6.30ರ ಸುಮಾರಿಗೆ ವರ್ಲಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಾಜಲಕ್ಷ್ಮಿ ರಾಜಕೃಷ್ಣನ್ ಎಂಬುವರಿಗೆ ಕಾರು ಡಿಕ್ಕಿಯಾಗಿತ್ತು. ಅಪಘಾತದ ರಭಸಕ್ಕೆ ರಾಜಲಕ್ಷ್ಮಿ ಹಲವಾರು ಅಡಿಗಳ ದೂರಕ್ಕೆ ಹಾರಿ ಬಿದ್ದಿದ್ದರು. ಈ ವೇಳೆ ತಲೆಗೆ ತೀವ್ರ ಗಾಯ ಮೃತಪಟ್ಟಿದ್ದಾರೆ.

ಹಿಂಬದಿಯಿಂದ ವೇಗವಾಗಿ ಬಂದ ಎಸ್‌’ಯುವಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ರಾಜಲಕ್ಷ್ಮಿಗೆ ಡಿಕ್ಕಿ ಹೊಡೆದಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಕಾರು ಚಾಲಕನನ್ನು 23 ವರ್ಷದ ಸುಮರ್ ಮರ್ಚೆಂಟ್ ಎಂದು ಗುರುತಿಸಲಾಗಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನಗಳ ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮರ್ಚೆಂಟ್ ವಿರುದ್ಧ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಹಿಂದಿನ ಲೇಖನಕೋಲಾರದಲ್ಲಿ ಕಾಂಗ್ರೆಸ್ ನೆಲ ಕಚ್ಚುತ್ತಿರುವುದರಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಿಲ್ಲ: ವರ್ತೂರು ಪ್ರಕಾಶ್
ಮುಂದಿನ ಲೇಖನಉಯಿಲು 30 ವರ್ಷಕ್ಕಿಂತ ಹಳೆಯದಾದ ಮಾತ್ರಕ್ಕೆ ಅದನ್ನು ಅಸಲಿ ಎಂದು ಭಾವಿಸಲಾಗದು: ಸುಪ್ರೀಂ ಕೋರ್ಟ್