ಮನೆ ಕ್ರೀಡೆ ಟಿ20 ವಿಶ್ವಕಪ್ : 20 ತಂಡಗಳು, 55 ಪಂದ್ಯಗಳು

ಟಿ20 ವಿಶ್ವಕಪ್ : 20 ತಂಡಗಳು, 55 ಪಂದ್ಯಗಳು

0

ಬಹುನಿರೀಕ್ಷಿತ ಟಿ20 ವಿಶ್ವಕಪ್ ​ಗಾಗಿ ದಿನಗಣನೆ ಶುರುವಾಗಿದೆ. ಜೂನ್ 2 ರಿಂದ ಶುರುವಾಗಲಿರುವ ಈ ಟೂರ್ನಿಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯವಹಿಸುತ್ತಿದೆ.

Join Our Whatsapp Group

ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಯುಎಸ್​ಎನಲ್ಲಿ ಐಸಿಸಿ ಟೂರ್ನಿ ನಡೆಯುತ್ತಿದೆ. ಹಾಗೆಯೇ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯುತ್ತಿದೆ.

ಈ ತಂಡಗಳನ್ನು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ಮೂರು ಹಂತಗಳಲ್ಲಿ ಪಂದ್ಯಾವಳಿ ನಡೆಯಲಿದೆ.  ಅಂದರೆ ಇಲ್ಲಿ ಲೀಗ್ ಹಂತ, ಆ ಬಳಿಕ ಸೂಪರ್-8 ಹಂತ ಇದಾದ ನಂತರ ನಾಕೌಟ್ ಹಂತಗಳಲ್ಲಿ ಪಂದ್ಯಗಳು ಜರುಗಲಿದೆ.

ಈ ಬಾರಿಯ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 20 ತಂಡಗಳನ್ನು 4 ಗ್ರೂಪ್ ​ಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪುಗಳಲ್ಲಿ 5 ತಂಡಗಳು ಕಾಣಿಸಿಕೊಳ್ಳಲಿದೆ. ಅದರಂತೆ ಲೀಗ್ ಹಂತದಲ್ಲಿ A,B,C ಮತ್ತು D ಗುಂಪುಗಳಲ್ಲಿನ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ.

ಇಲ್ಲಿ ಪ್ರತಿ ಗುಂಪುಗಳಲ್ಲಿರುವ ತಂಡ ಒಟ್ಟು 4 ಪಂದ್ಯಗಳನ್ನಾಡಲಿದೆ. 4 ಗ್ರೂಪ್ ​ಗಳ ನಡುವಣ ಪಂದ್ಯಗಳ ಬಳಿಕ ಪಾಯಿಂಟ್ಸ್ ಟೇಬಲ್​ ಲೆಕ್ಕಾಚಾರ ಬರಲಿದೆ. ಅಂದರೆ ಆಯಾ ಗ್ರೂಪ್​ ಗಳ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಈ ಮೂಲಕ ನಾಲ್ಕು ಗುಂಪುಗಳಿಂದ ಒಟ್ಟು 8 ತಂಡಗಳು ಸೂಪರ್-8 ಹಂತಕ್ಕೇರಲಿದೆ.

ಸೂಪರ್-8 ಹಂತದಲ್ಲಿ ಒಟ್ಟು 8 ತಂಡಗಳ ನಡುವೆ ಕಾದಾಟ ನಡೆಯಲಿದೆ. ಈ ಹಂತದಲ್ಲಿ ಎಂಟು ತಂಡಗಳು ಪರಸ್ಪರ ಒಂದೊಂದು ಪಂದ್ಯಗಳನ್ನಾಡಲಿದೆ. ಈ ವೇಳೆ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ 4 ತಂಡಗಳು ನಾಕೌಟ್ ಹಂತಕ್ಕೇರಲಿದೆ.

ಈ ನಾಲ್ಕು ತಂಡಗಳ ನಡುವೆ ಸೆಮಿಫೈನಲ್ ಕಾದಾಟ ನಡೆಯಲಿದೆ. ಸೆಮಿಫೈನಲ್ ​ನಲ್ಲಿ ಗೆಲ್ಲುವ 2 ತಂಡಗಳು ಜೂನ್ 29 ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಟಿ20 ವಿಶ್ವಕಪ್ ಗ್ರೂಪ್​:

ಗ್ರೂಪ್-A

ಭಾರತ

ಪಾಕಿಸ್ತಾನ್

ಐರ್ಲೆಂಡ್

ಕೆನಡಾ

ಯುಎಸ್​ಎ

ಗ್ರೂಪ್-B

ಇಂಗ್ಲೆಂಡ್

ಆಸ್ಟ್ರೇಲಿಯಾ

ನಮೀಬಿಯಾ

ಸ್ಕಾಟ್ಲೆಂಡ್

ಒಮಾನ್

ಗ್ರೂಪ್-C

ನ್ಯೂಝಿಲೆಂಡ್

ಅಫ್ಘಾನಿಸ್ತಾನ್

ವೆಸ್ಟ್ ಇಂಡೀಸ್

ಉಗಾಂಡ

ಪಪುವಾ ನ್ಯೂಗಿನಿಯಾ

ಗ್ರೂಪ್-D

ಸೌತ್ ಆಫ್ರಿಕಾ

ಬಾಂಗ್ಲಾದೇಶ್

ನೆದರ್​ಲೆಂಡ್ಸ್​

ಶ್ರೀಲಂಕಾ

ನೇಪಾಳ

ಟಿ20 ವಿಶ್ವಕಪ್ ವೇಳಾಪಟ್ಟಿ:

2024 ರ ಟಿ20 ವಿಶ್ವಕಪ್ ಜೂನ್ 2 ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯವು ಜೂನ್ 29 ರಂದು ಬಾರ್ಬಡೋಸ್​ನಲ್ಲಿ ನಡೆಯಲಿದೆ. ಇನ್ನು ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.