ಹುಬ್ಬಳ್ಳಿ: ವಕ್ಪ್ ಕಾಯ್ದೆ ತಿದ್ದುಪಡಿಗೆ ಸಂವಿಧಾನ ಬದ್ದವಾಗಿ ಸಂಸತ್ತಿನ ಜಂಟಿ ಸದನ ಸಮಿತಿ ರಚನೆಯಾಗಿದ್ದು, ಸಮಿತಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ (ನ.08) ಮಾತನಾಡಿದ ಅವರು, ವಕ್ಪ್ ಸಂಸದೀಯ ಮಂಡಳಿ ಕರ್ನಾಟಕಕ್ಕೆ ಭೇಟಿ ನೀಡಿರುವುದಕ್ಕೆ ಅದೊಂದು ಯಾವುದೇ ಆಧಾರ ಹಿತವಾದ ಸಮಿತಿ ಎಂದು ಕಾಂಗ್ರೆಸ್ ನವರು ಮಾಡಿರುವ ಆರೋಪಕ್ಕೆ ಉತ್ತರ ಕೊಟ್ಟ ಅವರು, ಇದೊಂದು ಪಾರ್ಲಿಮೆಂಟ್ ಮಾಡಿದ ಸಮಿತಿ. ಉಭಯ ಸದನಗಳಿಂದ ರಚನೆಯಾದ ಸಮಿತಿ, ಪಾರ್ಲಿಮೆಂಟ್ ಜಂಟಿ ಸದನ ಮಾಡಿದ ಸಮಿತಿಗೆ ತನ್ನದೇ ಆದ ಗೌರವ ಇದೆ. ಕರ್ನಾಟಕದಲ್ಲಿ ಸಮಸ್ಯೆ ಇದೆ ಅಂತ ಅವರು ಇಲ್ಲಿಗೆ ಬಂದಿದ್ದರು. ಯಾವುದೇ ರೀತಿಯ ರಾಜಕೀಯ ಇಲ್ಲ. ಸಮಿತಿಯವರು ರೈತರ ಸಮಸ್ಯೆ ಆಲಿಸಿದ್ದಾರೆ ಎಂದರು.
ಈ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು, ಓಲೈಕೆ ರಾಜಕಾರಣ ಮಾಡಲು ಆರೋಪ ಮಾಡುತ್ತಿದ್ದಾರೆ. ಅವರಿಗೆ ಸಂವಿಧಾನದ ಬಗ್ಗೆ ಸಂಸತ್ತಿನ ಬಗ್ಗೆಯೂ ಗೌರವ ಇಲ್ಲ ಎಂದು ಕಿಡಿ ಕಾರಿದರು.