ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ ಇಂದು 64ನೇ ಸೆಷನ್ಸ್ ಕೋರ್ಟ್ ನಲ್ಲಿ ನಡೆಯಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಪೊಲೀಸ್ ಠಾಣೆಗಳ ಹೊಸ ಮರುವಿಂಗಡಣೆ ಹಿನ್ನೆಲೆಯಲ್ಲಿ ನಟ ದರ್ಶನ್ ಸಂಬಂಧಿತ ಪ್ರಕರಣವನ್ನು 59ನೇ ಸೆಷನ್ಸ್ ಕೋರ್ಟ್ ಗೆ ವರ್ಗಾವಣೆ ಮಾಡಲಾಗುತ್ತಿದೆ.
ಈ ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ. ಈ ಹಿನ್ನೆಲೆ ಇಂದು ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ಯಾವ ರೀತಿಯಲ್ಲಿ ಮುಂದುವರಿಯಬೇಕು ಎಂಬ ಬಗ್ಗೆ ಅಧಿಕೃತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಜೂನ್ 1ರಿಂದ ಹೊಸ ಕೋರ್ಟ್ ಹಾಗೂ ಹೊಸ ನ್ಯಾಯಾಧೀಶರ ಮುಂದೆ ವಿಚಾರಣೆ ಆರಂಭವಾಗಲಿದ್ದು, ವಾರಕ್ಕೆ ಎರಡು ದಿನ ಅಥವಾ ನಾಲ್ಕು ದಿನ ಟ್ರಯಲ್ ನಡೆಸುವ ಬಗ್ಗೆ ನಿರ್ಧಾರ ಹೊರಬೀಳಬಹುದು.ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ಇಂದು 64ನೇ ಸೆಷನ್ಸ್ ಕೋರ್ಟ್ ನಲ್ಲಿ ನಡೆಯುತ್ತಿದೆ. ಈಗಾಗಲೇ ಸೆಷನ್ಸ್ ಕೋರ್ಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳ ನಿಯೋಜನೆ ಬದಲಾಗಿರುವ ಕಾರಣ, ದರ್ಶನ್ ಪ್ರಕರಣವನ್ನು 59ನೇ ಸೆಷನ್ಸ್ ಕೋರ್ಟ್ ಗೆ ವರ್ಗಾಯಿಸಲಾಗುತ್ತಿದೆ. ಪ್ರಕರಣದ ವಿಚಾರಣೆಯನ್ನು ದಿನನಿತ್ಯ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದರಿಂದ, ಇಂದು ನಡೆಯುವ ವಿಚಾರಣೆ ಮಹತ್ವ ಪಡೆದುಕೊಂಡಿದೆ.
ಜೂನ್ 1ರಿಂದ ಹೊಸ ಕೋರ್ಟ್ ನಲ್ಲಿ ವಿಚಾರಣೆ
ಜೂನ್ 1ರಿಂದ ಹೊಸ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗುವ ಸಾಧ್ಯತೆ ಇದ್ದು, ಹೊಸ ಜಡ್ಜ್ ಮುಂದೆ ಪ್ರಕರಣದ ಟ್ರಯಲ್ ನಡೆಯಲಿದೆ. ವಾರದಲ್ಲಿ ಎಷ್ಟು ದಿನ ವಿಚಾರಣೆ ನಡೆಸಬೇಕು ಎಂಬ ಕುರಿತು ಕೋರ್ಟ್ ಅಧಿಕೃತ ಆದೇಶ ನೀಡುವ ಸಾಧ್ಯತೆ ಇದೆ.
ಯಾಕೆ ಈ ನಿರ್ಧಾರ ಮುಖ್ಯ?
ಈ ನಿರ್ಧಾರದಿಂದ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಎಷ್ಟು ವೇಗವಾಗಿ ಸಾಗಲಿದೆ ಎಂಬುದು ಸ್ಪಷ್ಟವಾಗಲಿದೆ. ಜೊತೆಗೆ ವಿಚಾರಣೆಯ ವೇಗವೇ ನಟ ದರ್ಶನ್ ಜೈಲಿನಲ್ಲಿರುವ ಅವಧಿ ಹಾಗೂ ಜಾಮೀನು ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.ಇನ್ನೊಂದೆಡೆ, ಸೆಷನ್ಸ್ ಕೋರ್ಟ್ ಗಳಿಗೆ ಪೊಲೀಸ್ ಠಾಣೆಗಳ ಮರುಹಂಚಿಕೆ ಮಾಡಲಾಗಿದ್ದು, ವಿಜಯನಗರ ಸಬ್ ಡಿವಿಜನ್ ಅನ್ನು 59ನೇ ಸೆಷನ್ಸ್ ಕೋರ್ಟ್ ವ್ಯಾಪ್ತಿಗೆ ಸೇರಿಸಲಾಗಿದೆ. ಇದರ ಪರಿಣಾಮವಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಪ್ರಕರಣಗಳು 59ನೇ ಸೆಷನ್ಸ್ ಕೋರ್ಟ್ ಗೆ ವರ್ಗಾವಣೆ ಆಗಲಿವೆ. ಸಿಟಿ ಸಿವಿಲ್ ಕೋರ್ಟ್ ಡೆಪ್ಯುಟಿ ರಿಜಿಸ್ಟ್ರಾರ್ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.


















