ಮನೆ ಮನರಂಜನೆ ʼಟರ್ಬೋʼ: ಸೂಪರ್‌ ಸ್ಟಾರ್‌ ಮಮ್ಮುಟ್ಟಿ ಮುಂದೆ ಖಡಕ್‌ ವಿಲನ್‌ ಆದ ರಾಜ್‌ ಬಿ ಶೆಟ್ಟಿ

ʼಟರ್ಬೋʼ: ಸೂಪರ್‌ ಸ್ಟಾರ್‌ ಮಮ್ಮುಟ್ಟಿ ಮುಂದೆ ಖಡಕ್‌ ವಿಲನ್‌ ಆದ ರಾಜ್‌ ಬಿ ಶೆಟ್ಟಿ

0

ಕೊಚ್ಚಿ/ ಬೆಂಗಳೂರು: ಮಾಲಿವುಡ್‌ ಸೂಪರ್‌ ಸ್ಟಾರ್‌ ಮಮ್ಮುಟ್ಟಿ ಅಭಿನಯದ ಬಹು ನಿರೀಕ್ಷಿತ ʼಟರ್ಬೋʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ.

Join Our Whatsapp Group

ಕನ್ನಡದ ಖ್ಯಾತ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಸೂಪರ್‌ ಸ್ಟಾರ್‌ ಮಮ್ಮುಟ್ಟಿ ಮುಂದೆ ಮಾಸ್‌ ಅವತಾರದಲ್ಲಿ ಆರ್ಭಟಿಸಿದ್ದಾರೆ.

ʼಟರ್ಬೋ ಜೋಸೆʼ ಆಗಿ ಮಮ್ಮುಟ್ಟಿ ಕಾಣಿಸಿಕೊಂಡಿದ್ದಾರೆ. ತನ್ನ ಫೈಟ್‌ ಗಳಿಂದ ಮಿಂಚುವ ಜೋಸೆಯ ಎದುರಿಗೆ ಪೈಪೋಟಿಯಾಗಿ ವ್ಯಕ್ತಿಯೊಬ್ಬ(ರಾಜ್‌ ಬಿ ಶೆಟ್ಟಿ) ಬರುತ್ತಾನೆ. ಈ ಇಬ್ಬರ ನಡುವೆ ಇರುವ ವೈರತ್ವದ ಕಥೆಯ ಝಲಕ್‌ ನ್ನು ಟ್ರೇಲರ್‌ ನಲ್ಲಿ ಸಖತ್‌ ಥ್ರಿಲ್‌ ನೀಡುವ ಆ್ಯಕ್ಷನ್ ಸನ್ನಿವೇಶಗಳ ಮೂಲಕ ತೋರಿಸಲಾಗಿದೆ.

ರಾಜ್‌ ಬಿ ಶೆಟ್ಟಿ ಲುಂಗಿ ತೊಟ್ಟು ಪಕ್ಕಾ ಲೋಕಲ್‌ ಡಾನ್‌ ನಂತೆ ಹೀರೋ ಮುಂದೆ ವಿಲನ್‌ ಆಗಿ, ಪವರ್‌ ಫುಲ್‌ ಡೈಲಾಗ್ಸ್‌ ಗಳನ್ನು ಹೇಳಿದ್ದಾರೆ. ಅವರ ಅಭಿನಯ ಸಿನಿಮಂದಿಗೆ ಮೋಡಿ ಮಾಡಿದೆ.

ಮಮ್ಮುಟ್ಟಿ ‘ಭೀಷ್ಮ ಪರ್ವಂ’ ಬಳಿಕ ಮತ್ತೊಮ್ಮೆ ಮಾಸ್‌ ಅವತಾರದಲ್ಲಿ ʼಟರ್ಬೋʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಟ್ರೇಲರ್‌ ಇಂಟರ್‌ ನೆಟ್‌ ಟ್ರೆಂಡ್‌ ಆಗಿದೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಕಂಡಿದೆ.

ಸಿನಿಮಾವನ್ನು ವೈಶಾಖ್ ನಿರ್ದೇಶನ ಮಾಡಿದ್ದು, ‘ಅಂಜಮ್ ಪತಿರಾ’ ಮತ್ತು ‘ಅಬ್ರಹಾಂ ಓಜ್ಲರ್’ ನಿರ್ದೇಶಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದಿದ್ದಾರೆ.

ಮಮ್ಮುಟ್ಟಿ, ರಾಜ್ ಬಿ ಶೆಟ್ಟಿ, ತೆಲುಗು ನಟ ಸುನಿಲ್ ,ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕ್, ಶಬರೀಶ್ ವರ್ಮಾ , ದಿಲೀಶ್ ಪೋತನ್ ಮುಂತಾದವರು ನಟಿಸಿದ್ದಾರೆ.

ಇದೇ ಮೇ.23 ರಂದು ಸಿನಿಮಾ ತೆರೆ ಕಾಣಲಿದೆ.

ಹಿಂದಿನ ಲೇಖನಅಪಹರಣ ಪ್ರಕರಣ: ಎಚ್ ​ಡಿ ರೇವಣ್ಣಗೆ ಜಾಮೀನು ಮಂಜೂರು- ನಾಳೆ ಬಿಡುಗಡೆ
ಮುಂದಿನ ಲೇಖನನಿಯಂತ್ರಣ ತಪ್ಪಿ ಟ್ಯಾಂಕರ್‌ ಗೆ ಡಿಕ್ಕಿ ಹೊಡೆದ ಕಾರು: ಮೂವರು ಬ್ಯಾಂಕ್ ಉದ್ಯೋಗಿಗಳ ಸಾವು