ಮನೆ ರಾಜಕೀಯ ಉತ್ತರ ಪ್ರದೇಶ ಚುನಾವಣೆ: 54 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಎಸ್ಪಿ

ಉತ್ತರ ಪ್ರದೇಶ ಚುನಾವಣೆ: 54 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಎಸ್ಪಿ

0

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಎಸ್‌ಪಿ ತನ್ನ 54 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಮಾಯಾವತಿ ನೇತೃತ್ವದ ಬಿಎಸ್ ಪಿ ಪಕ್ಷವು ಏಳು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಗೋರಖ್‌ಪುರ ನಗರ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಖ್ವಾಜಾ ಸಂಶುದ್ದೀನ್ ಅವರನ್ನು ಕಣಕ್ಕಿಳಿಸಿದೆ.

ಸಂತೋಷ್ ತಿವಾರಿ ಅವರನ್ನು ಕುಶಿನಗರ ಜಿಲ್ಲೆಯ ಫಾಜಿಲ್‌ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ತಿವಾರಿ ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿ ಮತ್ತು ಮಾಜಿ ಬಿಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಎದುರಿಸಲಿದ್ದಾರೆ. ಕತೇಹಾರಿಯಿಂದ ಪ್ರತೀಕ್ ಪಾಂಡೆ ಮತ್ತು ಅಕ್ಬರ್‌ಪುರದಿಂದ ಚಂದ್ರಪ್ರಕಾಶ್ ವರ್ಮಾ ಅವರಿಗೆ ಟಿಕೆಟ್ ನೀಡಿದೆ. ಎರಡೂ ಕ್ಷೇತ್ರಗಳು ಅಂಬೇಡ್ಕರ್‌ನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ.

ಹಾಲಿ ಶಾಸಕ ಉಮಾಶಂಕರ್ ಸಿಂಗ್ ಅವರನ್ನು ಬಲ್ಲಿಯಾದ ರಾಸ್ರಾದಿಂದ ಕಣಕ್ಕಿಳಿಸಿದೆ.ಗೋರಖ್‌ಪುರದ ಚಿಲ್ಲುಪರ್‌ನಿಂದ ರಾಜೇಂದ್ರ ಸಿಂಗ್‌ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಹೆಸರಿಸಿದೆ. ಅಂಬೇಡ್ಕರ್‌ನಗರ, ಬಲರಾಂಪುರ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳವ 54 ವಿಧಾನಸಭಾ ಕ್ಷೇತ್ರಗಳಿಗೆ ಬಿಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಮಾರ್ಚ್ 3 ರಂದು ರಾಜ್ಯ ವಿಧಾನಸಭಾ ಚುನಾವಣೆಯ ಆರನೇ ಹಂತದಲ್ಲಿ ಈ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ಹಿಂದಿನ ಲೇಖನಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ: ಹೈಕೋರ್ಟ್ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧಗಳು ಸಡಿಲ
ಮುಂದಿನ ಲೇಖನಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಇಶಾನ್ ಕಿಶನ್ ಕಣಕ್ಕೆ: ರೋಹಿತ್ ಶರ್ಮಾ