ಮನೆ ಕ್ರೀಡೆ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಇಶಾನ್ ಕಿಶನ್ ಕಣಕ್ಕೆ: ರೋಹಿತ್ ಶರ್ಮಾ

ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಇಶಾನ್ ಕಿಶನ್ ಕಣಕ್ಕೆ: ರೋಹಿತ್ ಶರ್ಮಾ

0
Ishan Kishan of Mumbai Indians and Rohit Sharma captain of Mumbai Indians during the final of season 13 of the Dream 11 Indian Premier League (IPL) between the Mumbai Indians and the Delhi Capitals held at the Dubai International Cricket Stadium, Dubai in the United Arab Emirates on the 10th November 2020. Photo by: Saikat Das / Sportzpics for BCCI

ಅಹ್ಮದಾಬಾದ್​: ವೆಸ್ಟ್​ ಇಂಡೀಸ್​ ವಿರುದ್ಧ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ  ಕೆಎಲ್ ರಾಹುಲ್​ ಲಭ್ಯರಿಲ್ಲ ಅಲ್ಲದೇ ಶಿಖರ್​ ಧವನ್​ಗೆ ಕೊರೊನಾ ಬಂದಿರುವುದರಿಂದ ಇಶಾನ್ ಕಿಶನ್​ ತಮ್ಮ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಫೆಬ್ರವರಿ 6 ರಿಂದ ವಿಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ಭಾರತ ತಂಡದ ಅಹ್ಮದಾಬಾದ್​ಗೆ ಆಗಮಿಸಿದ ನಂತರ ನಡೆಸಿದ ಕೋವಿಡ್​ ಪರೀಕ್ಷೆಯಲ್ಲಿ 4 ಆಟಗಾರರು ಸೇರಿದಂತೆ ಒಟ್ಟು 7 ಮಂದಿಗೆ ಕೋವಿಡ್​ 19 ಪಾಸಿಟಿವ್ ದೃಢಪಟ್ಟಿತ್ತು.

ಶಿಖರ್​ ಧವನ್​, ಶ್ರೇಯಸ್​ ಅಯ್ಯರ್​, ನದದೀಪ್​ ಸೈನಿ ಮತ್ತು ರುತುರಾಜ್​ ಗಾಯಕ್ವಾಡ್​ ಹಾಗೂ 3 ಮಂದಿ ಬೆಂಬಲ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿತ್ತು. ಆರಂಭಿಕ ಧವನ್​ ಕ್ವಾರಂಟೈನ್​ನಲ್ಲಿದ್ದರೆ, ಉಪನಾಯಕ ರಾಹುಲ್ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಹಾಗಾಗಿ ಇಶಾನ್​ ಕಿಶನ್​ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ರೋಹಿತ್ ಮಾಹಿತಿ ನೀಡಿದ್ದಾರೆ. ತಂಡದಲ್ಲಿರುವ ಆಟಗಾರರಲ್ಲಿ ಆರಂಭಿಕ ಸ್ಥಾನಕ್ಕೆ ಇಶಾನ್​ ಕಿಶನ್​ ನಮ್ಮ ಮುಂದಿರುವ ಏಕೈಕ ಆಯ್ಕೆಯಾಗಿದೆ. ಅವರು ನನ್ನ ಜೊತೆ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್​ ಆರಂಭಿಸುತ್ತಾರೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 6, 9 ಮತ್ತು 11ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 3 ಏಕದಿನ ಪಂದ್ಯಗಳು ನಡೆಯಲಿವೆ, ಕೋವಿಡ್​ ಕಾರಣ ಈ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ , ಆದರೆ ಟಿ20 ಸರಣಿ ಕೋಲ್ಕತ್ತಾದ ಈಡನ್​ ಗಾರ್ಡನ್​​ನಲ್ಲಿ ಶೇ.75 ರಷ್ಟು ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಲಿದೆ.

ಹಿಂದಿನ ಲೇಖನಉತ್ತರ ಪ್ರದೇಶ ಚುನಾವಣೆ: 54 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಎಸ್ಪಿ
ಮುಂದಿನ ಲೇಖನಶಿಕ್ಷಣವನ್ನು ನಿಯಂತ್ರಿಸುತ್ತಿರುವ ತ್ರಿಕೋನ ಶಕ್ತಿಗಳು: ಶಿಕ್ಷಣ ತಜ್ಞ ಬಿ.ಶ್ರೀಪಾದ ಭಟ್‌