ಮನೆ ಸುದ್ದಿ ಜಾಲ ಅಮೆರಿಕ ಮತ್ತು ಇರಾನ್ ಅಂತಿಮ ಒಪ್ಪಂದದ ಕರಡು ರಚನೆಗಾಗಿ ತೀವ್ರಗೊಳಿಸಿದ ಪರೋಕ್ಷ ಮಾತುಕತೆ

ಅಮೆರಿಕ ಮತ್ತು ಇರಾನ್ ಅಂತಿಮ ಒಪ್ಪಂದದ ಕರಡು ರಚನೆಗಾಗಿ ತೀವ್ರಗೊಳಿಸಿದ ಪರೋಕ್ಷ ಮಾತುಕತೆ

0

ಟೆಹ್ರಾನ್ (ಇರಾನ್​): ಇರಾನ್​ ಜೊತೆಗಿನ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸಾಧ್ಯವಾದ ಒಪ್ಪಂದದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಅಮೆರಿಕ, ಇಸ್ಲಾಮಿಕ್​ ಸ್ಟೇಟ್​ ಜೊತೆಗೆ ಪರೋಕ್ಷ ಮಾತುಕತೆಗೆ ಮುಂದಾಗಿದೆ ಎಂದು ಇರಾನ್​ ಐಎಸ್​ಎನ್​ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿಗಳ ಪ್ರಕಾರ, ಎರಡು ದೇಶಗಳು ಈಗಾಗಲೇ ಕರಡು ಪ್ರತಿ ಮತ್ತು ಸಂದೇಶವನ್ನು ವಿನಿಮಯ ಮಾಡಿಕೊಂಡಿದೆ. ಈ ಮುಂಚೆ ಅಲ್​ಜಜೀರಾಗೆ ಹೇಳಿಕೆ ನೀಡಿದ್ದ ಇರಾನ್​ ಅಧಿಕಾರಿಗಳು ತಿಳಿವಳಿಕೆಯ ಮಾತುಕತೆ ಸಮೀಪ ಇರುವುದಾಗಿ ತಿಳಿಸಿದ್ದರು. ಮೊಹ್ಸಿನ್ ನಖ್ವಿ ಸದ್ಯ ಇರಾನ್‌ನಲ್ಲಿ ಹಾರ್ಮುಜ್ ಜಲಸಂಧಿಯ ಸ್ಥಿತಿಗತಿಯ ಕುರಿತು ಚರ್ಚಿಸಲಿದ್ದಾರೆ. ಜೊತೆಗೆ ತೀವ್ರವಾದ ಮಧ್ಯಸ್ಥಿಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿ ತಿಳಿಸಿದೆ. ಈ ಅಂತಿಮ ಒಪ್ಪಂದವೂ ಅಂತಿಮ ಹಂತಕ್ಕೆ ತಲುಪಿದೆ ಎಂದು ನಿರ್ಧರಿಸುವುದಕ್ಕೆ ಈಗಲೇ ಸಾಧ್ಯವಿಲ್ಲ ಎಂದು ಕೂಡ ಅಲ್​ಜಜೀರಾ ತಿಳಿಸಿದೆ. ವಾಷಿಂಗ್ಟನ್​ ಪೋಸ್ಟ್​ ಜೊತೆಗೆ ಮಾತನಾಡಿರುವ ಅಮೆರಿಕ ಅಧಿಕಾರಿಗಳು, ಪರಿಸ್ಥಿತಿಯು ಅಸಮತೋಲನವು ಜಾಗತಿಕ ಭದ್ರತೆಗೆ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತ್ತಾಗಿ ಇಸ್ರೇಲ್ ರಕ್ಷಿಸಲು ಅಮೆರಿಕ 200ಕ್ಕೂ ಹೆಚ್ಚು ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಇಂಟರ್‌ಸೆಪ್ಟರ್‌ಗಳನ್ನು ಮತ್ತು ಪೂರ್ವ ಮೆಡಿಟರೇನಿಯನ್‌ನಲ್ಲಿರುವ ನೌಕಾ ಹಡಗುಗಳಿಂದ ಹಾರಿಸಲಾದ 100ಕ್ಕೂ ಹೆಚ್ಚು ಸ್ಟ್ಯಾಂಡರ್ಡ್ ಮಿಸೈಲ್-3 ಮತ್ತು ಸ್ಟ್ಯಾಂಡರ್ಡ್ ಮಿಸೈಲ್ – 6 ಇಂಟರ್‌ಸೆಪ್ಟರ್‌ಗಳನ್ನು ಉಡಾಯಿಸಿದೆ. ಇದರಿಂದಾಗಿ ಪೆಂಟಗನ್‌ನ ದಾಸ್ತಾನಿನ ಅರ್ಧದಷ್ಟು ಖಾಲಿಯಾಗಿದೆ  ಈ ನಡುವೆ ಇಸ್ರೇಲ್​ 100ಕ್ಕಿಂತ ಕಡಿಮೆ ಆರೋ ಇಂಟರ್‌ಸೆಪ್ಟರ್‌ಗಳನ್ನು ಮತ್ತು ಸುಮಾರು 90 ಡೇವಿಡ್ಸ್ ಸ್ಲಿಂಗ್ ಇಂಟರ್‌ಸೆಪ್ಟರ್‌ಗಳನ್ನು ಹಾರಿಸಿದೆ. ಅವುಗಳಲ್ಲಿ ಕೆಲವು ಯೆಮೆನ್ ಮತ್ತು ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಗುಂಪುಗಳು ಹಾರಿಸಿದ ಕಡಿಮೆ ಅತ್ಯಾಧುನಿಕ ಸ್ಪೋಟಕಗಳನ್ನು ಹೊಡೆದುರುಳಿಸಲು ಈ ಇಂಟರ್​ಸೆಪ್ಟರ್​ ಗಳನ್ನು ಬಳಸಲಾಗಿದೆ  ಇದಕ್ಕೂ ಮುನ್ನ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ಇರಾನ್​ ಯುರೇನಿಯಂ ಪುಷ್ಟೀಕರಣಕ್ಕೆ ನಾವು ಬಿಡುವುದಿಲ್ಲ.

ಅದನ್ನು ಅಲ್ಲಿಂದ ಪಡೆದ ಬಳಿಕ ನಾಶ ಮಾಡುತ್ತೇವೆ. ಶೀಘ್ರದಲ್ಲೇ ಅದು ಕೊನೆಯಾಗುತ್ತದೆ. ಈ ಎಲ್ಲ ಸಮಸ್ಯೆಗಳು ಬಗೆಹರಿದ ಮೇಲೆ ತೈಲ ಬೆಲೆಯಲ್ಲಿ ಹಿಂದೆಂದಿಗಿಂತಲೂ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ. ಗುರುವಾರ ಈ ಬಗ್ಗೆ ಮಾತನಾಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಯುದ್ದ ಕೊನೆಗೊಳ್ಳುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರು ಟೆಹ್ರಾನ್‌ನಲ್ಲಿ ಮಾತುಕತೆಗೆ ಸಜ್ಜಾಗಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.