ಮನೆ ಯೋಗಾಸನ ಉಷ್ಟ್ರಾಸನ

ಉಷ್ಟ್ರಾಸನ

0

ಉಷ್ಟ್ರಾಸನಕ್ಕೆ ಜಾನು ಪೃಷ್ಠವಲಿ ಶಾಸನ ಎಂಬ ಹೆಸರೂ ಇದೆ.

Join Our Whatsapp Group

ಮಾಡುವ ಕ್ರಮ

1)    ಮೊದಲು ನೇರವಾಗಿ, ಲಂಬವಾಗಿ ನಿಲ್ಲಬೇಕು.

2)    ಅನಂತರ ಮೊಣಕಾಲೂರಿ ಕುಳಿತುಕೊಳ್ಳಬೇಕು.

3)    ಉಸಿರನ್ನು ಹೊರಕ್ಕೆ ದೂಡುತ್ತಾ ನಿಧಾನವಾಗಿ ಹಿಂದಕ್ಕೆ ( ಸೊಂಟದ ಮೇಲಿನ ಶರೀರವನ್ನು) ಬಾಗಬೇಕು. ಈ ಸ್ಥಿತಿಯಲ್ಲಿ ಕತ್ತನ್ನು ಸಹ ಆದಷ್ಟು ಹಿಂದಕ್ಕೆ ಬಗ್ಗಿಸಬೇಕು.

4)    ಸಾಧ್ಯವಾದಷ್ಟು ಬೆನ್ನನ್ನು ಹಿಂದಕ್ಕೆ ಬಗ್ಗಿಸಿ ಚಿತ್ರದಲ್ಲಿ ತೋರಿಸುವಂತೆ ಕೈಗಳಿಂದ ಭೂಮಿಯನ್ನು ಸ್ವರ್ಶಿಸಬೇಕು.

5)    ಈ ಸ್ಥಿತಿಯಲ್ಲಿ ಬೆನ್ನು ಬಿಲ್ಲಿನಂತೆ ಬಗ್ಗಿರುತ್ತದೆ. ಇದೇ ಸ್ಥಿತಿಯಲ್ಲಿ ಆರೆಂಟು ಬಾರಿ ದೀರ್ಘವಾಗಿ ಉಸಿರಾಡಿ ಅನಂತರ ಯಥಾಸ್ಥಿತಿಗೆ ಬರಬೇಕು. ಹಿಂದಕ್ಕೆ ಬಾಗುವಾಗ ಹೆಚ್ಚಿನ ಜಾಗರೂಕತೆಯನ್ನು ವಹಿಸುವುದು ಉತ್ತಮ.

ಲಾಭಗಳು

ಉಷ್ಟ್ರಾಸನದ ಅಭ್ಯಾಸದಿಂದ ತೊಡೆ, ಸೊಂಟ, ಹೊಟ್ಟೆ, ಕುತ್ತಿಗೆ ಹೆಚ್ಚು ಸದೃಢವಾಗುವವು.  ಹರ್ನಿಯ, ಆಪೆಂಡಿಸೈಟಸ್ ನಿಂದ ನರಳುವವರಿಗೆ  ಉಷ್ಟ್ರಾಸನವು ಉಪಕಾರಿ ಮತ್ತು ಗೂನುಬೆನ್ನು ಸಹ ಇದರಿಂದ ಸ್ವಲ್ಪಮಟ್ಟಿಗೆ ನಿವಾರಣೆಯಾಗುವುದು.

ಹಿಂದಿನ ಲೇಖನಬಾ ಬಾ ಭಕುತರ ಹೃದಯ
ಮುಂದಿನ ಲೇಖನಮೇ ತಿಂಗಳಲ್ಲಿ 4 ಗ್ರಹಗಳ ಬದಲಾವಣೆ: ಈ 5 ರಾಶಿಯವರಿಗೆ ಲಾಭವೋ ಲಾಭ..!