ಶ್ಲೋಕ : ಇಂದ್ರಂದಧಿ ಯಮಂ ತೈಲ ವಾರುಣಂ ಗುದಮೇವಚ ||
ಉತ್ತರೇ ಕ್ಷೀರಮಯ ಹಾರಂ ಕೃತ್ವಾಗಚ್ಛೇನ್ನ ದೋಷಭಾಕ್ ||
ಅರ್ಥ : ವಾರ ಶೂಲೆಯ ದಿನಗಳಲ್ಲಿ ಪೂರ್ವ ದಿಕ್ಕಿಗೆ ಪ್ರಯಣ ಮಾಡಲೇಬೇಕಾದ ಪ್ರಸಂಗ ಬಂದಲ್ಲಿ ಮೊಸರನ್ನ ಸೇವಿಸಬೇಕು. ದಕ್ಷಿಣ ದಿಕ್ಕಿಗೆ ಪ್ರಯಾಣಿಸಬೇಕಾದಲ್ಲಿ ಅಭ್ರಂಜನ ಸ್ನಾನ ಮಾಡಿಕೊಂಡು ಹೊರಡಬೇಕು.ಪಶ್ಚಿಮ ದಿಕ್ಕಿಗೆ ಪ್ರಯಣಿಸಕಾದಲ್ಲಿ ಬೆಲ್ಲವನ್ನು ಸೇವಿಸಿ ಹೊರಡಬೇಕು. ಉತ್ತರ ದಿಕ್ಕಿಗೆ ಪ್ರಯಾನೆಣಿಸುವದಿದ್ದಲ್ಲಿ ಹಾಲನ್ನು ಸೇವಿಸಿ ಪ ಪ್ರಯಾಣ ಮಾಡಿದರೆ ವಾರಶೂಲ ದೋಷವು ನಿವಾರಣೆಯಾಗುವುದಲ್ಲದೆ ಪ್ರಯಾಣದಲ್ಲಿ ಶುಭ ಫಲಗಳುಂಟಾಗುತ್ತವೆ.
ವಾರದೋಷ ವಿಚಾರದ ಬಗ್ಗೆ ಮಾಂಡವ್ಯ ಋಷಿಯ ಅಭಿಮತ
ಶ್ಲೋಕ :
*ದ್ವವಿಂಶತಿರ್ಗಶಾ ಚೈವ ಬುಧ ಭೌಮೇಚ ದ್ವಾದಶ
ಅಷ್ಟಾದಶ ಭೃಗೌ ಭಾನೌ ಮಂದೇಂದ್ವೌಶ್ಚಾಷ್ಟ ನಾಡಿಕಾಃ
ತ್ಯಕ್ತ್ವ ಗಚ್ಛನ್ನ ದೋಷಸ್ಯಾನ್ಮಾಂಡವ್ಯ ವಚನಂ ತಥಾ |
ಅರ್ಥ : ವಾರ ಶೂಲ ದೋಷವಿದ್ದಾಗ್ಯೂ ಗುರುವಾರ 22 ಘಳಿಗೆ,ಬುಧವಾರ ಮಂಗಳವಾರಗಳಲ್ಲಿ 12 ಘಳಿಗೆ,ಶುಕ್ರವಾರ ರವಿವಾರಗಳಲ್ಲಿ 18 ಘಳಿಗೆ. ಶನಿವಾರ ಸೋಮವಾರಗಳಲ್ಲಿ 8 ಗಳಿಗೆ ಸಮಯ ಕಳೆದು ದೇವರನ್ನು ಧ್ಯಾನಿಸಿ,ಆ ದಿಕ್ಕಿಗೆ ಪ್ರಯಾಣ ಮಾಡಿದರೆ ವಾರಶೂಲೆಯ ದೋಷವು ತಗಲುವುದಿಲ್ಲವೆಂದು ಮಂಡವ್ಯ ಋಷಿಗಳು ಅಭಿಪ್ರಾಯ ಪಡುತ್ತಾರೆ. ಸೂರ್ಯೋದಯದಿಂದ ಮೇಲೆ ಹೇಳಿದಷ್ಟು ಘಳಿಗೆಗಳನ್ನು ಕಳೆದು ಹೋರಡಬೇಕು.