ಮನೆ ಮನರಂಜನೆ ಶಿವ ಭಕ್ತ ಕಣ್ಣಪ್ಪನ ಪಾತ್ರದಲ್ಲಿ ವಿಷ್ಣುಮಂಚು ನಟನೆ

ಶಿವ ಭಕ್ತ ಕಣ್ಣಪ್ಪನ ಪಾತ್ರದಲ್ಲಿ ವಿಷ್ಣುಮಂಚು ನಟನೆ

0

ಶಿವನ ಅಚಲ ಭಕ್ತನಾದ ಕಣ್ಣಪ್ಪನ ಕಥೆಯುಳ್ಳ ಸಿನಿಮಾದಲ್ಲಿ ವಿಷ್ಣುಮಂಚು ನಟಿಸುತ್ತಿದ್ದು, ಈ ಚಿತ್ರಕ್ಕೆ ಇತ್ತೀಚೆಗೆ ಕಾಳಹಸ್ತಿಯಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

ಭಾರತೀಯ ಚಿತ್ರರಂಗದ ಜನಪ್ರಿಯ ಕಲಾವಿದರನ್ನು ಒಳಗೊಂಡಿರುವ ಮತ್ತು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ ಟೈನ್ಮೆಂಟ್‌ ಬ್ಯಾನರ್‌ ನಡಿ ಈ ಚಿತ್ರವನ್ನು ನಟ ಡಾ. ಮೋಹನ್‌ ಬಾಬು ನಿರ್ಮಿಸುತ್ತಿದ್ದಾರೆ.

ಈ ಚಿತ್ರಕ್ಕೆ ಲೇಖಕರಾದ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್‌, ತೋಟಪಲ್ಲಿ ಸಾಯಿನಾಥ್‌ ಮತ್ತು ಬುರ್ರಾ ಸಾಯಿ ಮಾಧವ್‌ ಚಿತ್ರಕಥೆ ಮತ್ತು ಸಂಭಾ ಷಣೆಯನ್ನು ರಚಿಸಿದ್ದು, ಮಣಿಶರ್ಮಾ ಮತ್ತು ಸ್ಟೀಫ‌ನ್‌ ದೇವಸ್ಸೆ ಸಂಗೀತ ಹಾಗೂ ಶೆಲ್ಡನ್‌ ಶಾ ಅವರ ಛಾಯಾಗ್ರಹಣವಿದೆ. ಮುಖೇಶ್‌ ಕುಮಾರ್‌ ಸಿಂಗ್‌ ಚಿತ್ರಕ್ಕೆ ನಿರ್ದೇಶನವಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಹೆಸ್ಕಾಂನಲ್ಲಿ 248 ITI ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ