ಮನೆ ಸುದ್ದಿ ಜಾಲ ₹209 ಕೋಟಿ ನೀರಿನ ಬಿಲ್ ಬಾಕಿ ̧  ಸರ್ಕಾರಿ ಇಲಾಖೆಗಳಲ್ಲೇ ಹೆಚ್ಚು : ಮೈಸೂರು

₹209 ಕೋಟಿ ನೀರಿನ ಬಿಲ್ ಬಾಕಿ ̧  ಸರ್ಕಾರಿ ಇಲಾಖೆಗಳಲ್ಲೇ ಹೆಚ್ಚು : ಮೈಸೂರು

0

ಮೈಸೂರು: ನಗರದಲ್ಲಿರುವ ವಿವಿಧ ಸರ್ಕಾರಿ ಇಲಾಖೆಗಳು, ವಾಣಿಜ್ಯ ಕಟ್ಟಡಗಳು, ಗೃಹಬಳಕೆ ಹಾಗೂ ಕೈಗಾರಿಕೆಗಳು 209.17 ಕೋಟಿ ರೂಪಾಯಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿವೆ. ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಬಾಕಿ ಮಸೂಲಿ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಬಾಕಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು ಮಹಾನಗರ ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ಹಾಗೂ ಒಳಚರಂಡಿ ವಿಭಾಗದಿಂದ ಸರ್ಕಾರಿ ಇಲಾಖೆಗಳು, ಕೈಗಾರಿಕೆಗಳು, ವಾಣಿಜ್ಯ ಮಳಿಗೆಗಳು ಹಾಗೂ ಗೃಹ ಬಳಕೆಗೆ ನೀರಿನ ಸಂಪರ್ಕ ಪಡೆದುಕೊಂಡಿವೆ ಎಂಬುದ್ದಾಗಿದೆ.

ಹಾಗೂ ಇದಕ್ಕೆ ವಾಣಿ ವಿಲಾಸ ನೀರು ಸರಬರಾಜು ಹಾಗೂ ಒಳಚರಂಡಿ ವಿಭಾಗದಿಂದ ಪ್ರತಿ ತಿಂಗಳು ಬಿಲ್ ನೀಡಲಾಗುತ್ತಿದೆ. ಆದರೆ, ಹಲವು ವರ್ಷಗಳಿಂದ ನೀರಿನ ಬಿಲ್ ಪಾವತಿಸದೆ ಸರ್ಕಾರಿ ಸ್ವಾಮ್ಯದ ಇಲಾಖೆಗಳು 41,04,48,436 ರೂ. ಬಾಕಿ ಉಳಿಸಿಕೊಂಡಿದ್ದರೆ, ಮತ್ತೊಂದೆಡೆ ವಾಣಿಜ್ಯ ಗೃಹಬಳಕೆ ಕೈಗಾರಿಕೆಗಳು 1,68,13,13,525 ರೂ. ಬಾಕಿ ಉಳಿಸಿಕೊಂಡಿವೆ. ಪಾಲಿಕೆ ನೀರಿನ ದರ ಪರಿಸ್ಕರಿಸಿ ಶೇ.36ರಷ್ಟು ಏರಿಸಿದೆ. ಪರಿಸ್ಕರಿಸಿದ ದರವನ್ನು ಏ.1ರಿಂದ ಜಾರಿಗೊಳಿಸಲಾಗಿದೆ. ಅದರಂತೆ ಕನಿಷ್ಠ ಮಾಸಿಕ ಶುಲ್ಕವನ್ನು 125ರಿಂದ 163 ರೂ.ಗೆ ಏರಿಸಲಾಗಿದೆ. ನಂತರ ಪ್ರತಿ 25 ಸಾವಿರ ಲೀ.ಗೆ 6.50 ರೂ., 25 ರಿಂದ 50 ಲೀ.ಗೆ 10 ರೂ., 50 ರಿಂದ 75 ಲೀ.ಗೆ ರೂ. 75 ರಿಂದ 1 ಲಕ್ಷ ಲೀ.ಗೆ 20 ರೂ., ಲಕ್ಷಕೂ ಹೆಚ್ಚು ಬಳಸಿದರೆ 25 ರೂ ಹೆಚ್ಚಿಸಿದೆ. ಇದಲ್ಲದೆ ಯುಜಿಡಿ ಸೆಸ್ ಕೂಡ ಹೆಚ್ಚಿಸಿದ್ದು, ನೀರಿನ ಬಿಲ್​ನ ಶೇ.30ರಷ್ಟಿದ್ದ ಒಳಚರಂಡಿ ಸೆಸ್​ ಅನ್ನು ಶೇ. 40ಕ್ಕೆ ಹೆಚ್ಚಿಸಲಾಗಿದೆ. ಈಗಾಗಲೇ ಪಾಲಿಕೆ ನೀರಿನ ದರ ಏರಿಕೆ ಮಾಡಿ ವಾಣಿವಿಲಾಸ ವಿಭಾಗ ಅದನ್ನು ಅನುಷ್ಠಾನಗೊಳಿಸಿ ಎಲ್ಲರ ಮನೆ, ವಾಣಿಜ್ಯ ಕಟ್ಟಡ, ಕೈಗಾರಿಕೆಗಳು, ಸರ್ಕಾರಿ ಇಲಾಖೆಗಳಿಗೆ ಹೊಸ ನೀರಿನ ಬಿಲ್ ಕಳುಹಿಸಿದೆ.

ಈಗಾಗಲೇ ಇವರೆಲ್ಲರೂ ನೀರಿನ ಬಿಲ್ 209.17 ಕೋಟಿ ಬಾಕಿ ಉಳಿಸಿಕೊಂಡಿದ್ದು, ಇದನ್ನು ಪಾವತಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ನೂರಾರು ಕೋಟಿ ಬಿಲ್ ಬಾಕಿ ಉಳಿಯಲಿದೆ. ಈ ಬಗ್ಗೆ ಮೈಸೂರು ಪಾಲಿಕೆ ಎಚ್ಚೆತ್ತುಕೊಂಡು ವಿಶೇಷ ಕಾರ್ಯಾಚರಣೆ ಮಾಡಿ ಬಾಕಿ ಉಳಿದಿರುವ ಬಿಲ್‌ಗಳನ್ನು ವಸೂಲಿ ಮಾಡದಿದ್ದರೆ ಪಾಲಿಕೆ ಬೊಕ್ಕಸಕ್ಕೆ ಭಾರಿ ಹೊಡೆತ ಬೀಳಲಿದೆ. ಮೈಸೂರು ಪಾಲಿಕೆ ನೀರಿನ ಬಿಲ್ ಬಾಕಿದಾರರ ಪಟ್ಟಿಯಲ್ಲಿ ಸೇರಿದ್ದು, ತನ್ನದೇ ಆದ ನೀರು ಸರಬರಾಜು ವಿಭಾಗವಾದ ವಾಣಿ ವಿಲಾಸ ವಾಟರ್ ವರ್ಕ್ಸ್​ಗೆ 5,25,384 ರೂ. ಬಾಕಿ ಉಳಿಸಿಕೊಂಡಿದೆ. ತನ್ನದೇ ಆದ ಇಲಾಖೆಗೆ ಬಾಕಿ ಪಾವತಿಸಲು ವಿಫಲವಾಗಿದ್ದು, ಇತರ ಬಾಕಿದಾರರಿಂದ ಬಾಕಿ ಪಾವತಿದಾರರನ್ನು ವಸೂಲಿ ಮಾಡಲು ನಾಗರಿಕ ಸಂಸ್ಥೆ ಎಷ್ಟು ಪರಿಣಾಮಕಾರಿಯಾಗಿ ಒತ್ತಾಯಿಸುತ್ತದೆ ಎನ್ನಲಾಗುತ್ತಿದೆ.