ಮನೆ ಕ್ರೀಡೆ WTC Final: ದಿ ಓವಲ್ ​ನಲ್ಲಿ ಭಾರತದ ದಾಖಲೆ ಹೇಗಿದೆ ಗೊತ್ತಾ?

WTC Final: ದಿ ಓವಲ್ ​ನಲ್ಲಿ ಭಾರತದ ದಾಖಲೆ ಹೇಗಿದೆ ಗೊತ್ತಾ?

0

ಲಂಡನ್ ​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂದಿನಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ​ಶಿಪ್ ಫೈನಲ್ ಪಂದ್ಯ ಶುರುವಾಗಲಿದೆ. ಒಟ್ಟು 5 ದಿನಗಳ ಕಾಲ ನಡೆಯಲಿರುವ ಎರಡನೇ ಆವೃತ್ತಿಯ ಡಬ್ಲ್ಯೂಟಿಸಿ 2023 ಫೈನಲ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಟೀಮ್ ಇಂಡಿಯಾದ ಎಲ್ಲ ಆಟಗಾರರು ಇದೀಗ ಲಂಡನ್​ ನ ಓವಲ್ ಕ್ರೀಡಾಂಗಣಕ್ಕೆ ಕಾಲಿಟ್ಟಿದ್ದಾರೆ. 143 ವರ್ಷಗಳ ಇತಿಹಾಸ ಹೊಂದಿರುವ ಓವಲ್‌ ಗ್ರೌಂಡ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ನಡೆಯುತ್ತಿರುವುದು ವಿಶೇಷ.

Join Our Whatsapp Group

ಈ ಅಂಗಳದಲ್ಲಿ ಬೌಲರ್‌ ಗಳಿಗೆ ಪಿಚ್‌ ಹೇಗೆ ವರ್ತಿಸುತ್ತದೆ ಎಂಬುದು ಇನ್ನೂ ಗೊತ್ತಾಗದ ಸಂಗತಿ. ಮಿಸ್ಟ್ರಿ ಪಿಚ್ ಎಂದೇ ಹೇಳಲಾಗುವ ಕೆನ್ನಿಂಗ್ಟನ್ ಓವಲ್ ​ನಲ್ಲಿ ವಿಶ್ವದ ಎರಡನೇ ಅತ್ಯಂತ ಹಳೆಯ ಕ್ರೀಡಾಂಗಣ. ಈ ಪಿಚ್ ಹಿಂದೆ ವೇಗಿಗಳಿಗೆ ಅನುಕೂಲಕರವಾಗಿದ್ದರೆ, ಕಳೆದ ಆರು ಪಂದ್ಯಗಳು ಇದಕ್ಕೆ ವಿರುದ್ಧವಾಗಿ ಕಂಡಿವೆ. 2016 ರಿಂದ ಓವಲ್‌ನಲ್ಲಿ ನಡೆದ ಕೊನೆಯ 6 ಟೆಸ್ಟ್‌ ಗಳು ದಿನಗಳು ಕಳೆದಂತೆ ಪಿಚ್ ಕ್ರಮೇಣ ಉತ್ತಮಗೊಳ್ಳುತ್ತವೆ ಎಂದು ತೋರಿಸಿದೆ.

ಕೆನ್ನಿಂಗ್ಟನ್ ಓವಲ್ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದ ದಾಖಲೆಯನ್ನು ಹೊಂದಿದೆ. ಇಂಗ್ಲೆಂಡಿನ ಹವಾಮಾನವು ಯಾವಾಗಲೂ ಬದಲಾಗುತ್ತಿರುತ್ತದೆ ಮತ್ತು ಅನಿರೀಕ್ಷಿತವಾಗಿರುವುದರಿಂದ ಚೆಂಡು ಮತ್ತು ಬ್ಯಾಟ್​ನ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟ. ಟಾಸ್‌ನ ಫಲಿತಾಂಶ ನಿರ್ಣಾಯಕ ಎಂದು ಹೇಳಬಹುದು. ಪಂದ್ಯದ ಅಂತಿಮ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿ ಆಗುತ್ತಾರೆ. ಹಸಿರು ಮೇಲ್ಮೈ ಕೊರತೆಯಿಂದಾಗಿ ಇಲ್ಲಿ ವೇಗದ ಬೌಲರ್‌ಗಳ ದಾಖಲೆಗಳು ಉತ್ತಮವಾಗಿಲ್ಲ.

ಅಂಕಿಅಂಶಗಳು:

ಪಂದ್ಯಗಳು: 104

ತವರಿನ ತಂಡ (ಇಂಗ್ಲೆಂಡ್) ಗೆಲುವು: 43

ಪ್ರವಾಸಿ ತಂಡದ ಗೆಲುವು: 23

ಪಂದ್ಯ ಡ್ರಾ: 37

ಮೊದಲು ಬ್ಯಾಟಿಂಗ್ ಮಾಡಿದ ತಂಡ : 37 ಗೆಲುವು

ದ್ವಿತೀಯ ಬ್ಯಾಟಿಂಗ್ ಮಾಡಿದ ತಂಡ : 29 ಗೆಲುವು

ಗರಿಷ್ಠ ಸ್ಕೋರ್: 903/7

ಕನಿಷ್ಠ ಸ್ಕೋರ್: 44 ರನ್​ ಗೆ ಆಲೌಟ್

ಸರಾಸರಿ 1 ನೇ ಇನ್ನಿಂಗ್ಸ್ ಸ್ಕೋರ್: 343

ಸರಾಸರಿ 2 ನೇ ಇನ್ನಿಂಗ್ಸ್ ಸ್ಕೋರ್: 304

ಸರಾಸರಿ 3 ನೇ ಇನ್ನಿಂಗ್ಸ್ ಸ್ಕೋರ್: 238

ಓವಲ್‌ ನಲ್ಲಿ ಭಾರತವು ಅದ್ಭುತ ದಾಖಲೆ ಹೊಂದಿಲ್ಲ. ಇಲ್ಲಿ ಆಡಿದ 14 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ 2ರಲ್ಲಿ ಗೆಲುವು, 5ರಲ್ಲಿ ಸೋಲು, 7ರಲ್ಲಿ ಡ್ರಾ ಸಾಧಿಸಿದೆ. ಓವಲ್‌ ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 157 ರನ್‌ಗಳಿಂದ ಸೋಲಿಸಿದೆ ಎಂಬುದು ಭಾರತದ ಹೆಮ್ಮೆಯ ಸಂಗತಿ.

ಹಿಂದಿನ ಲೇಖನದರ್ಬಾರ್ ಪರಿಶುದ್ದ ಹಾಸ್ಯಚಿತ್ರ : ನಾಯಕ‌ ಸತೀಶ್
ಮುಂದಿನ ಲೇಖನKRIDE ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ