ಮನೆ ಯೋಗಾಸನ ಆರೋಗ್ಯಯುತ ಬದುಕಿಗೆ ಯೋಗ ತುಂಬಾ ಮುಖ್ಯ: ಸಂಸದ ಪ್ರತಾಪ್ ಸಿಂಹ

ಆರೋಗ್ಯಯುತ ಬದುಕಿಗೆ ಯೋಗ ತುಂಬಾ ಮುಖ್ಯ: ಸಂಸದ ಪ್ರತಾಪ್ ಸಿಂಹ

0

ಮೈಸೂರು(Mysuru): ವಿದ್ಯೆ ಜೀವನಕ್ಕೆ ಎಷ್ಟು ಅಗತ್ಯವೋ ಆರೋಗ್ಯಯುತವಾದ  ಬದುಕಿಗೆ ಯೋಗ ತುಂಬಾ ಮುಖ್ಯವಾದದ್ದು ಎಂದು  ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ  ಪ್ರತಾಪ್ ಸಿಂಹ ಅವರು ತಿಳಿಸಿದರು.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಮೈಸೂರಿನಲ್ಲಿ 5ನೇ ದಿನದ ದಸರಾ ಸಂಭ್ರಮ ರಂಗೇರಿದೆ ಅರಮನೆ ಆವರಣದ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ  ಯೋಗ ದಸರಾ ಉಪಸಮಿತಿ 2022ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗ ಸರಪಳಿ ಕಾರ್ಯಕ್ರಮವನ್ನು  ಸಂಸದ ಪ್ರತಾಪ್ ಸಿಂಹ ಅವರು ಉದ್ಘಾಟಿಸಿ ಮಾತನಾಡಿದರು  ನಾಡಹಬ್ಬ ದಸರಾವನ್ನು 26ರಿಂದ ಹಮ್ಮಿಕೊಳ್ಳಲಾಗಿ. ಯೋಗ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಜೂನ್ 21 ರಂದು ನಡೆಯುವ ಕಾರ್ಯಕ್ರಮ ಆಗದೆ ವರ್ಷವಿಡೀ ಪ್ರತಿನಿತ್ಯವೂ ಕೂಡ ನಮ್ಮ ಜೀವನದಲ್ಲಿ ಯೋಗ ಒಂದು ಭಾಗವಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಶ್ರೀಹರಿ ಅವರು  ಯೋಗ ಕಾರ್ಯಕ್ರಮವು 2015 ರಿಂದಲೂ ಸಹ ನಡೆಯುತ್ತಿದೆ. ಯೋಗ ಮತ್ತೆ-ಮತ್ತೆ ಪ್ರಚಾರಮಾಡಬೇಕು ಮತ್ತು ಹೆಚ್ಚು ಶಾಲೆಗಳು ಮೈಸೂರಿನಲ್ಲಿ  ತೆರೆಯಬೇಕು ಮೈಸೂರಿನ ಪ್ರತಿ ಶಾಲೆಯಲ್ಲಿ ಯೋಗ ಮಾಡುವ ಹಾಗೆ ಆಗಬೇಕು ಎಂದು ತಿಳಿಸಿದರು.

ಐ. ಡ್. ವ್ಯೆ ಬಂದಕಾರಣ ದೊಡ್ಡಪ್ರಮಾಣದಲ್ಲಿ ಯೋಗ ನಡೆಯುತ್ತಿದೆ ಎಲ್ಲಾ ಯೋಗ ಶಾಲೆಗಳು ಒಂದಾಗುತ್ತಾ ಇದ್ದಾವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳಾದ ಡಾ.ಪುಷ್ಪ,   ಯೋಗ ದಸರಾ ಉಪಸಮಿತಿಯ ಅಧ್ಯಕ್ಷರಾದ  ಬಾಲಕೃಷ್ಣ,  ವಿರೂಪಾಕ್ಷ ಬೆಳವಾಡಿ,  ಕೆ.ವೈ.ಮಂಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • ಟ್ಯಾಗ್ಗಳು
  • dasara
ಹಿಂದಿನ ಲೇಖನUCO ಸೆಕ್ಯುರಿಟಿ ಆಫೀಸರ್ ನೇಮಕಾತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಭಾರತ್ ಜೋಡೋ ಯಾತ್ರೆ ರಾಜ್ಯಕ್ಕೆ ಪ್ರವೇಶ: ಕಾಂಗ್ರೆಸ್ ನಾಯಕರಿಂದ ಸ್ವಾಗತ