ಲುಧಿಯಾನ ಪಂಜಾಬ್ನ ಬಡ ಕುಟುಂಬವೊಂದು 1.5 ಕೋಟಿ ಮೌಲ್ಯದ ಲಾಟರಿ ಗೆದಿದ್ದು. ಪಠಾಣ್ಕೋಟ್ನ ಸುಜನ್ಪುರದ ಯುವಕ ನರೇಶ್ ಮೆಹ್ರಾ ₹1.5 ಕೋಟಿ ಲಾಟರಿ ಬಹುಮಾನ ಗೆದ್ದ ಯುವಕನಾಗಿದ್ದಾನೆ. ಆ ಯುವಕ ತನ್ನ ವಿಜೇತ ಟಿಕೆಟ್ನೊಂದಿಗೆ ಲುಧಿಯಾನಕ್ಕೆ ಪ್ರಯಾಣ ಬೆಳೆಸಿದ್ದು, ವಿಜಯಶಾಲಿ ಕುಟುಂಬಕ್ಕೆ ಅದ್ಧೂರಿ ಸ್ವಾಗತ ದೊರೆತಿದೆ. ಲಾಟರಿ ಗೆದ್ದ ಖುಷಿಗೆ ಕುಟುಂಬದ ಎಲ್ಲ ಸದಸ್ಯರಿಗೆ ಲಡ್ಡು ವಿತರಿಸಿ ಯುವಕ ಸಂಭ್ರಮಿಸಿದ್ದಾನೆ. ಅಷ್ಟೇ ಅಲ್ಲ ಲಾಟರಿ ಗೆದ್ದ ಖುಷಿಗೆ ಡೋಲು ಬಾರಿಸುವ ಮೂಲಕ ನೃತ್ಯ ಮಾಡಿ ಮನೆಮಂದಿಯಲ್ಲ ಖುಷಿ ಪಟ್ಟರು. ಲಾಟರಿ ಗೆದ್ದ ಯುವಕ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ಈ ಲಾಟರಿ ಗೆದ್ದ ಕುರಿತು ಮಾತನಾಡಿದ ನರೇಶ್ ಮೆಹ್ರಾ, ನಾನು ಖಾಸಗಿ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತೇನೆ. ನಮ್ಮ ಕುಟುಂಬವು ತುಂಬಾ ಬಡತನದಿಂದ ಕೂಡಿದೆ. ನನ್ನ ತಂದೆ 2020ರಲ್ಲಿ ನಿಧನರಾದರು. ಪ್ರಸ್ತುತ ನನ್ನ ಕುಟುಂಬದಲ್ಲಿ ನಾನು, ನನ್ನ ತಾಯಿ ಮತ್ತು ನನ್ನ ಕಿರಿಯ ಸಹೋದರ ಇದ್ದೇವೆ. ನನ್ನ ಸಹೋದರ ಮತ್ತು ನಾನು ಇಬ್ಬರೂ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಕಳೆದ ತಿಂಗಳು (ಏಪ್ರಿಲ್) 25 ರಂದು ನಾನು ₹200 ಮೌಲ್ಯದ ಲಾಟರಿ ಟಿಕೆಟ್ಗಳನ್ನು ಖರೀದಿಸಿದೆ. ಅದಕ್ಕೂ ಮೊದಲು ನಾನು ಹೋಳಿ ಮತ್ತು ಬೈಸಾಖಿ ಬಂಪರ್ ಲಾಟರಿಗಳಿಗೆ ಟಿಕೆಟ್ಗಳನ್ನು ಖರೀದಿಸಿದ್ದೆ. ನಾನು ಲಾಟರಿ ಟಿಕೆಟ್ ನಿಂದ ಬಹುಮಾನವನ್ನು ಗೆದ್ದಿರುವುದು ಇದು ಮೂರನೇ ಬಾರಿ. ನನ್ನ ಕುಟುಂಬ ಮತ್ತು ನಾನು ತುಂಬಾ ಸಂತೋಷಗೊಂಡಿದ್ದೇವೆ. ಈಗ, ನನ್ನ ಕೆಲಸದ ಬಗ್ಗೆ ನನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ನರೇಶ್ ತಮ್ಮ ಖುಷಿ ಹಂಚಿಕೊಂಡರು ಎಂದು ತಿಳಿಸಲಾಗಿದೆ.
ಈ ಕುರಿತ್ತಾಗಿ ನಾನು ಭಾಗವಹಿಸಿದ್ದ ಲಾಟರಿಯ ಡ್ರಾ ಇಂದು ನಿಗದಿಯಾಗಿದೆ ಎಂದು ನನಗೆ ತಿಳಿದಿತ್ತು. ನಾನು ಕೆಲಸದಿಂದ ವಿರಾಮ ಪಡೆದ ನಂತರ, ನನ್ನ ಫೋನ್ ಪರಿಶೀಲಿಸಿದೆ. ಆ ಪ್ರಕಾರ ವಿಜೇತ ಸಂಖ್ಯೆಯನ್ನು ನಾನು ಖರೀದಿಸಿದ ಟಿಕೆಟ್ನಲ್ಲಿರುವ ಸಂಖ್ಯೆಯೊಂದಿಗೆ ಕ್ರಾಸ್- ಚೆಕ್ ಮಾಡಿದಾಗ, ಅವು ಸಂಪೂರ್ಣವಾಗಿ ಹೊಂದಿಕೆಯಾದವು. ಆಗ ನಾನು ಲಾಟರಿ ಗೆದ್ದಿರುವುದು ಗೊತ್ತಾಯಿತು ಎಂದು ನರೇಶ್ ಮೆಹ್ರಾ ವಿವರಿಸಿದರು. ಲಾಟರಿ ಗೆಲುವಿನ ಬಗ್ಗೆ ತಿಳಿದ ತಕ್ಷಣ, ಮನೆಯಲ್ಲಿ ಸಂತೋಷದ ಅಲೆ ಎದ್ದಿತು ಎಂದು ತಿಳಿಸಿದ್ದಾರೆ. ಹಾಗೂ ಯುವಕ ಬಡ ಕುಟುಂಬಕ್ಕೆ ಸೇರಿದ್ದು ತನಗೆ ಕಾರುಗಳ ಬಗ್ಗೆ ಯಾವುದೇ ನಿರ್ದಿಷ್ಟ ಪ್ರೀತಿ ಇಲ್ಲ ಎಂದಿದ್ದಾರೆ. ಆದರೆ, ತನ್ನ ಮನೆಯ ಪರಿಸ್ಥಿತಿಯನ್ನು ಗಮನಿಸಿದರೆ, ಗೆದ್ದ ಹಣವನ್ನು ಬಳಸಿಕೊಂಡು ತನ್ನ ಮನೆಯನ್ನು ನವೀಕರಿಸುವುದು ಮತ್ತು ದುರಸ್ತಿ ಮಾಡುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ತಮ್ಮ ಮನದಿಂಗಿತವನ್ನು ಹೇಳಿದ್ದಾರೆ ನರೇಶ್. ಪ್ರಸ್ತುತ ಅವರು ಅವಿವಾಹಿತರು ಎಂಬುದು ವಿಶೇಷ ಎನ್ನಬಹುದು.

















