ಮನೆ ಅಪರಾಧ ಬೆಳಗಾವಿ ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ: ಕಾರಣ ನಿಗೂಢ

ಬೆಳಗಾವಿ ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ: ಕಾರಣ ನಿಗೂಢ

0

ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಕಾಂಪೌಂಡ್ ಬಳಿಯೇ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಸೋಮವಾರ (ನ.18) ಬೆಳಗಿನ ಜಾವ ನಡೆದಿದೆ.

Join Our Whatsapp Group

ಮರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಿಹಾಳ ಹಾಗೂ ಮಾವಿನಕಟ್ಟಿ ಗ್ರಾಮದ ಬಳಿಯ ಬೆಳಗಾವಿ ವಿಮಾನ ನಿಲ್ದಾಣದ ಕಾಂಪೌಂಡ್ ಸಮೀಪದ ಹೊಲದಲ್ಲಿ ಮೃತದೇಹ ಪತ್ತೆಯಾಗಿದೆ. ಯುವಕನ ಜೇಬಿನಲ್ಲಿ ದ್ವಿಚಕ್ರ ವಾಹನದ ಚೀಲಿ ಕೈ ಪತ್ತೆಯಾಗಿದೆ.

ಯುವಕನ ಗುರುತು ಪತ್ತೆಯಾಗಿಲ್ಲ. ಕಲ್ಲಿನಿಂದ ತಲೆಗೆ ಜಜ್ಜಿ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ರೈತರು ಮೃತ ದೇಹ ನೋಡಿ ಗಾಬರಿಗೊಂಡು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊನ್ನಿಹಾಳ ಹಾಗೂ ಮಾವಿನಕಟ್ಟಿ ರಸ್ತೆ ಮಾರ್ಗದಲ್ಲಿ ವಾಹನಗಳು ಓಡಾಡದಂತೆ ಪೊಲೀಸರು ತಡೆ ಹಿಡಿದಿದ್ದಾರೆ. ಕೊಲೆ ನಡೆದ ಜಾಗವನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಸ್ಥಳದ ಪಕ್ಕದಲ್ಲಿ ವಾಹನ ಇದೆಯೇ ಎಂಬುದನ್ನು ಶೋಧ ನಡೆಸುತ್ತಿದ್ದಾರೆ.