ಮನೆ ಸುದ್ದಿ ಜಾಲ ಧಾರವಾಡದಲ್ಲಿ ಬೈಕ್ ಓಡಿಸುತ್ತಿದ್ದಾಗಲೇ ಹೃದಯಾಘಾತ : 43 ವರ್ಷದ ವ್ಯಕ್ತಿ ಸಾವು

ಧಾರವಾಡದಲ್ಲಿ ಬೈಕ್ ಓಡಿಸುತ್ತಿದ್ದಾಗಲೇ ಹೃದಯಾಘಾತ : 43 ವರ್ಷದ ವ್ಯಕ್ತಿ ಸಾವು

0

ಧಾರವಾಡ: ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗ ಈ ಜೀವ ಕೇವಲ ವೃದ್ಧರ ಸಮಸ್ಯೆಯೆಂಬ ಕಲ್ಪನೆ ತಪ್ಪಾಗುತ್ತಿದೆ. ಇತ್ತೀಚಿಗೆ ಯುವಜನತೆಯಲ್ಲಿಯೂ ಹೃದಯ ಸಂಬಂಧಿ ಸಮಸ್ಯೆಗಳು ಆತಂಕ ಹುಟ್ಟಿಸುತ್ತಿರುವುದು ನಿಜ. ಇಂತಹುದೇ ಒಂದು ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಬೈಕ್ ಓಡಿಸುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತ ಉಂಟಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.

ಮೃತ ವ್ಯಕ್ತಿಯನ್ನು ಕುರುಬಗಟ್ಟಿ ಗ್ರಾಮದ ನಿವಾಸಿ ದುರ್ಗಪ್ಪ ಹರಿಜನ್ (ವಯಸ್ಸು 43) ಎಂದು ಗುರುತಿಸಲಾಗಿದೆ. ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ದುರ್ಗಪ್ಪ ಅವರು ತಮ್ಮ ದುಡಿಮೆಗಾಗಿ ಬೈಕ್‌ನಲ್ಲಿ ಹೊರಟಿದ್ದ ವೇಳೆ ಎದೆನೋವಿನಿಂದ ಕೆಳಗೆ ಬಿದ್ದುಕೊಳ್ಳುತ್ತಾರೆ. ಸ್ಥಳೀಯರು ತಕ್ಷಣವೇ ಸಹಾಯಕ್ಕೆ ಧಾವಿಸಿದರು ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಘಟನೆಯ ಮಾಹಿತಿ ಪಡೆದ ಧಾರವಾಡ ಗ್ರಾಮೀಣ ಪೊಲೀಸ್ ಇಲಾಖೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದೆ. ಮೃತದೇಹವನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಅಷ್ಟರಲ್ಲೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.

ಇದೊಂದು ಏಕೈಕ ಘಟನೆ ಅಲ್ಲ. ಕೇವಲ ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ವರನೊಬ್ಬನು ತನ್ನ ಮದುವೆ ವೇಳೆ ವಧುವಿಗೆ ತಾಳಿ ಕಟ್ಟಿದ ಕೇವಲ 10 ನಿಮಿಷಗಳಲ್ಲಿಯೇ ಹೃದಯಾಘಾತದಿಂದ ಮಂಟಪದಲ್ಲೇ ಸಾವನ್ನಪ್ಪಿದ್ದ. ಸಂಭ್ರಮದಿಂದ ತುಂಬಿದ್ದ ಮನೆಗಳಲ್ಲಿ ಕ್ಷಣದಲ್ಲಿ ಶೋಕ ವಾತಾವರಣ ಆವರಿಸಿಕೊಂಡಿತ್ತು.

ಆರೋಗ್ಯ ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ 30-40 ವಯೋಮಾನದವರಲ್ಲಿಯೇ ಹೃದಯಾಘಾತಗಳು ಹೆಚ್ಚಾಗುತ್ತಿವೆ. ಅತಿಯಾದ ಒತ್ತಡ, ನಿದ್ರಾ ಕೊರತೆ, ತಿನ್ನುವ ಆಹಾರದಲ್ಲಿನ ಅಸಮತೋಲನ ಇವುಗಳೆಲ್ಲ ಕಾರಣಗಳಾಗುತ್ತಿವೆ. “ಸಾಮಾನ್ಯ ಎದೆನೋವು, ದಣಿವು, ಉಸಿರಾಟದ ತೊಂದರೆ ಇತ್ಯಾದಿಗಳನ್ನು ಕಡೆಗಣಿಸಬಾರದು. ಇದು ಹೃದಯಾಘಾತದ ಸೂಚನೆ ಆಗಿರಬಹುದು” ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.