ಮನೆ ಆರೋಗ್ಯ ಕೊರೊನಾ: ದೇಶದಲ್ಲಿ 67,084 ಹೊಸ ಪ್ರಕರಣ ಪತ್ತೆ

ಕೊರೊನಾ: ದೇಶದಲ್ಲಿ 67,084 ಹೊಸ ಪ್ರಕರಣ ಪತ್ತೆ

0

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 67,084 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿಯಲ್ಲಿ 1,241 ಸಾವು ಸಂಭವಿಸಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ದೇಶದಲ್ಲಿ 67,084 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,24,10,976ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 5,06,520ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,90,789 ಕ್ಕೆ ತಲುಪಿದೆ.ದಿನಂಪ್ರತಿಯ ಪಾಸಿಟಿವ್ ದರ ಶೇಕಡಾ 4.44ರಷ್ಟಿದೆ. 

ಈ ಮಧ್ಯೆ, ಕಳೆದ 24 ಗಂಟೆಗಳಲ್ಲಿ 1,67,882 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,11,80,751ಕ್ಕೆ ಏರಿಕೆಯಾಗಿದೆ. 

ಇನ್ನು ಭಾರತದಲ್ಲಿ ಒಂದೇ 13,46,534ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈ ವರೆಗೂ 74,29,08,121 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 1,71,28,19,947 ಡೋಸ್ ಲಸಿಕೆ ವಿತರಿಸಲಾಗಿದೆ. 

ಹಿಂದಿನ ಲೇಖನಉತ್ತರ ಪ್ರದೇಶ ಚುನಾವಣೆ: ಮೊದಲ ಹಂತದ ಮತದಾನ ಆರಂಭ
ಮುಂದಿನ ಲೇಖನಇಂದಿನ ನಿಮ್ಮ ರಾಶಿ ಭವಿಷ್ಯ