ಮನೆ ಅಪರಾಧ ಫೇಸ್ ಬುಕ್ ನಲ್ಲಿ ಕಿರುಕುಳ: ಮೈಸೂರಿನ ಸೈಬರ್ ಠಾಣೆಗೆ ಪವಿತ್ರಾ ಲೋಕೇಶ್ ದೂರು

ಫೇಸ್ ಬುಕ್ ನಲ್ಲಿ ಕಿರುಕುಳ: ಮೈಸೂರಿನ ಸೈಬರ್ ಠಾಣೆಗೆ ಪವಿತ್ರಾ ಲೋಕೇಶ್ ದೂರು

0

ಮೈಸೂರು(Mysuru):  ವ್ಯಕ್ತಿಯೊಬ್ಬರು ನನ್ನ ಹೆಸರಿನ ನಕಲಿ ಫೇಸ್ ಬುಕ್ ಖಾತೆ ತೆರೆದು ಅನುಚಿತವಾಗಿ ಸಂದೇಶ ಕಳುಹಿಸುತ್ತಿದ್ದಾರೆ ಎಂದು  ನಟಿ ಪವಿತ್ರಾ ಲೋಕೇಶ್ ನಜರಾಬಾದ್‌ನ ಸೈಬರ್‌ ಮತ್ತು ಆರ್ಥಿಕ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದಲ್ಲದೇ, ಘನತೆಗೆ ಧಕ್ಕೆ ತರುವ ಸಂದೇಶ ಕಳುಹಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು  ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಸೈಬರ್‌ ಅಪರಾಧ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ. . . ನಟಿ ಮೀನಾ ಪತಿ ವಿದ್ಯಾಸಾಗರ್‌ ನಿಧನ