ಶಿವಮೊಗ್ಗ: ಪಾಲಿಕೆ ನಿರ್ಮಿಸಿದ್ದ ಅವೈಜ್ಞಾನಿಕ ಹಂಪ್‌ಗೆ ಯುವಕ ಬಲಿಯಾದ ಘಟನೆ ಶಿವಮೊಗ್ಗದ ಎಲ್‌ಬಿಎಸ್ ನಗರದಲ್ಲಿ ನಡೆದಿದೆ. ಮೃತನನ್ನು ನಗರದ ಉಲ್ಲಾ (35) ಎಂದು ಗುರುತಿಸಲಾಗಿದೆ.
ಎಲ್‌ಬಿಎಸ್ ನಗರದ ಫ್ಲೈಓವರ್ ಬಳಿ ಹಂಪ್ ಕಾಣದೇ ಉಲ್ಲಾ ಅವರು ಬೈಕ್‌ನಿಂದ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಹಂಪ್ ಕಾಣದೇ ಬೈಕ್‌ನಿಂದ ಬಿದ್ದಿರುವ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ಉಲ್ಲಾ ಅವರು ಶಿವಮೊಗ್ಗದ ಸಂಗೀತಾ ಮೊಬೈಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು.















