ಟೆಹ್ರಾನ್, ಇರಾನ್: ಅಮೆರಿಕದೊಂದಿಗೆ ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳು ಸಂಘರ್ಷವನ್ನು ಕೊನೆಗೊಳಿಸುವತ್ತ ಮಾತ್ರ ಕೇಂದ್ರೀಕರಿಸಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಹಂತದಲ್ಲಿ ಪರಮಾಣು ವಲಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಾಘೈ ಹೇಳಿದ್ದಾರೆ. ಅಮೆರಿಕದೊಂದಿಗೆ ಸಂಘರ್ಷ ಮುಕ್ತಾಯಗೊಳಿಸುವ ಕುರಿತು ಒಪ್ಪಂದಕ್ಕೆ ಬಂದರೆ, ನಂತರದ 60 ದಿನಗಳ ಅವಧಿಯಲ್ಲಿ ಪರಮಾಣು ವಿಷಯದ ಕುರಿತು ಚರ್ಚೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಸದ್ಯಕ್ಕೆ ಇರಾನಿನ ಪ್ರತಿನಿಧಿಗಳು ಪಾಕಿಸ್ತಾನಕ್ಕೆ ಭೇಟಿ ನೀಡುವ ಅಥವಾ ಪಾಕಿಸ್ತಾನದ ಪ್ರತಿನಿಧಿಗಳು ಇರಾನ್ಗೆ ಭೇಟಿ ನೀಡುವ ಯಾವುದೇ ಯೋಜನೆಗಳಿಲ್ಲ ಎಂದು ಬಾಘೈ ತಿಳಿಸಿದ್ದಾರೆ. ಇರಾನ್ನೊಂದಿಗೆ ಮಾಡಿಕೊಂಡ ಯಾವುದೇ ಒಪ್ಪಂದಕ್ಕೆ ಅಮೆರಿಕ ಬದ್ಧವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಯಾವುದೇ ಗ್ಯಾರಂಟಿಗಳಿಲ್ಲ ಎಂದು ಬಾಘೈ ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ.
ಅದೇ ಸಮಯದಲ್ಲಿ ಯಾವುದೇ ಬೆದರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಸಲಾಗುತ್ತದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಲೆಬನಾನ್ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ನಿಬಂಧನೆಯನ್ನು ಈ ಚರ್ಚೆಗಳಲ್ಲಿ ಸೇರಿಸಲಾಗಿದೆ ಎಂದೂ ಅವರು ಗಮನಕ್ಕೆ ತಂದರು. ಶಾಂತಿ ಮಾತುಕತೆಗಳು ಪ್ರಗತಿಯಲ್ಲಿರುವಾಗ ಆಗಾಗ್ಗೆ ಬದಲಾಗುತ್ತಿರುವ ನಿಲುವುಗಳಿಗಾಗಿ ಅಮೆರಿಕವನ್ನು ಇರಾನ್ ಸೋಮವಾರ ಬಲವಾಗಿ ಟೀಕಿಸಿದೆ. ಈ ಬದಲಾವಣೆಗಳು ಮಾತುಕತೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತಿವೆ ಎಂಬ ಅಭಿಪ್ರಾಯ ಇರಾನಿದ್ದಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಾಘೈ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮಾತುಕತೆಯಲ್ಲಿ ಭಾಗವಹಿಸುವ ಪಕ್ಷಗಳು ಹಲವಾರು ವಿಷಯಗಳ ಬಗ್ಗೆ ಒಮ್ಮತಕ್ಕೆ ಬಂದಿವೆ ಅವರು ಇದೇ ವೇಳೆ ದೃಢಪಡಿಸಿದ್ದಾರೆ. ಚರ್ಚೆಯಲ್ಲಿರುವ ಹಲವು ವಿಷಯಗಳ ಬಗ್ಗೆ ನಾವು ಒಮ್ಮತಕ್ಕೆ ಬಂದಿದ್ದೇವೆ ಎಂಬುದು ನಿಜ. ಆದರೆ, ಒಪ್ಪಂದಕ್ಕೆ ತಲುಪಲಾಗಿದೆ ಎಂಬ ಬಗ್ಗೆ ಖಚಿತವಾಗಿದೆ ಎಂದು ಯಾರೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಅಮೆರಿಕನ್ ಅಧಿಕಾರಿಗಳ ನಿಲುವಿನಲ್ಲಿ ಆಗಾಗ್ಗೆ ಆಗುತ್ತಿರುವ ಬದಲಾವಣೆಗಳು ಪ್ರತಿಯೊಂದು ಸುತ್ತಿನ ಮಾತುಕತೆಗಳನ್ನು ಸಂಕೀರ್ಣಗೊಳಿಸುತ್ತಾ ಸಾಗಿವೆ. ಆದರೆ, ಪ್ರಸ್ತುತ ಮಾತುಕತೆಗಳ ಪ್ರಾಥಮಿಕ ಉದ್ದೇಶ ಯುದ್ಧವನ್ನು ಕೊನೆಗೊಳಿಸುವುದಾಗಿದೆ.
ಹಾಗೂ ಈ ಕುರಿತ್ತಗಿ ಈ ಹಂತದಲ್ಲಿ ನಾವು ಪರಮಾಣು ಸಮಸ್ಯೆಯ ನಿರ್ದಿಷ್ಟತೆಗಳನ್ನು ಚರ್ಚಿಸುತ್ತಿಲ್ಲ ಎಂದು ಬಾಘೈ ಮತ್ತೆ ಮತ್ತೆ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಇರಾನ್ ಜೊತೆಗಿನ ಸಂಭಾವ್ಯ ಒಪ್ಪಂದದ ಕುರಿತು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಶಾಂತಿ ಒಪ್ಪಂದವನ್ನು ರೂಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರೂ ಕೂಡಾ ದೃಢಪಡಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಟ್ಟ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಭರವಸೆಯನ್ನೂ ನೀಡಿದ್ದಾರೆ. ಒಪ್ಪಂದವನ್ನು ತೀರ್ಮಾನಿಸಲು ಅವರು ಯಾವುದೇ ಆತುರದಲ್ಲಿಲ್ಲ ಎಂದು ರುಬಿಯೋ ಹೇಳಿದ್ದಾರೆ. ಪರ್ಯಾಯ ಆಯ್ಕೆಗಳನ್ನು ಅನ್ವೇಷಿಸುವ ಮೊದಲು ರಾಜತಾಂತ್ರಿಕತೆಗೆ ಪ್ರತಿಯೊಂದು ಅವಕಾಶವನ್ನೂ ನೀಡುವುದಾಗಿ ಅವರು ಹೇಳಿದ್ದಾರೆ. ಅನುಕೂಲಕರ ಒಪ್ಪಂದವನ್ನು ತಲುಪಲು ಸಾಧ್ಯವಾಗದಿದ್ದರೆ, ಸಮಸ್ಯೆಯನ್ನು ಇತರ ವಿಧಾನಗಳ ಮೂಲಕ ಪರಿಹರಿಸಬೇಕಾಗುತ್ತದೆ ಎಂದು ರೂಬಿಯೊ ಇದೇ ವೇಳೆ ಎಚ್ಚರಿಕೆಯನ್ನೂ ನೀಡಿದ್ದಾರೆ. ನಾವು ಇನ್ನೂ ಇದರ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ನಾನು ಹೇಳಿದಂತೆ, ಶೀಘ್ರವೇ ನಮಗೆ ಕೆಲವು ಮಾಹಿತಿ ಸಿಗುವ ನಿರೀಕ್ಷೆಯಿದೆ; ಬಹುಶಃ ಅದು ಇಂದು ಬರಬಹುದು. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದಿದ್ದಾರೆ. ಅಧ್ಯಕ್ಷರು ಹೇಳಿದಂತೆ ಅವರು ಯಾವುದೇ ಆತುರದಲ್ಲಿಲ್ಲ. ಅವರು ಕೆಟ್ಟ ಒಪ್ಪಂದಕ್ಕೆ ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ, ವಿಷಯಗಳು ಹೇಗೆ ತೆರೆದುಕೊಳ್ಳುತ್ತವೆ ಎಂಬುದನ್ನು ಕಾದು ನೋಡೋಣ. ಪರ್ಯಾಯಗಳನ್ನು ಅನ್ವೇಷಿಸುವ ಮೊದಲು ನಾವು ರಾಜತಾಂತ್ರಿಕತೆಗೆ ಪ್ರತಿಯೊಂದು ಅವಕಾಶವನ್ನೂ ನೀಡುತ್ತೇವೆ ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ ಎಂಬುದ್ದಾಗಿದೆ.


















