ಮನೆ ಸುದ್ದಿ ಜಾಲ ಏಕಾಏಕಿ ಹೊತ್ತಿಕೊಂಡ ಬೆಂಕಿ – ಹತ್ತಿ ಚೀಲಗಳು ಸುಟ್ಟು ಕರಕಲು

ಏಕಾಏಕಿ ಹೊತ್ತಿಕೊಂಡ ಬೆಂಕಿ – ಹತ್ತಿ ಚೀಲಗಳು ಸುಟ್ಟು ಕರಕಲು

0

ವಿಜಯಪುರ : ಏಕಾಏಕಿ ಹೊತ್ತಿಕೊಂಡ ಬೆಂಕಿಯಿಂದಾಗಿ 400ಕ್ಕೂ ಅಧಿಕ ಹತ್ತಿ ಚೀಲಗಳು ಸುಟ್ಟು ಕರಕಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ನಡೆದಿದೆ. ನಾಗಯ್ಯ ಮಿಣಜಗಿ ಎಂಬ ರೈತನಿಗೆ ಸೇರಿದ್ದ ಹತ್ತಿ ಚೀಲಗಳು ಅಗ್ನಿಗಾಹುತಿಯಾಗಿವೆ.

ನಾಗಯ್ಯ ಅವರು ಹಳೆಯ ಪಾಳುಬಿದ್ದ ಶಾಲೆಯ ಕಟ್ಟಡದಲ್ಲಿ ಹತ್ತಿ ಚೀಲಗಳನ್ನು ಸಂಗ್ರಹಸಿಟ್ಟಿದ್ದರು. ಇಂದು (ಮಾ.21) ಏಕಾಏಕಿ ಹತ್ತಿ ಚೀಲಗಳಿಗೆ ಬೆಂಕಿ ಆವರಿಸಿದ್ದು, 400ಕ್ಕೂ ಅಧಿಕ ಚೀಲಗಳು ಸುಟ್ಟು ಕರಕಲಾಗಿವೆ. ಈ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.