ಮನೆ ರಾಜ್ಯ ಸರ್ಕಾರಿ ಬಸ್‌ಗೆ ಗುದ್ದಿದ ಡೆಪ್ಯುಟಿ ಸ್ಪೀಕರ್ ಎಸ್ಕಾರ್ಟ್ ವಾಹನ – ಕೇಸ್‌ ದಾಖಲು

ಸರ್ಕಾರಿ ಬಸ್‌ಗೆ ಗುದ್ದಿದ ಡೆಪ್ಯುಟಿ ಸ್ಪೀಕರ್ ಎಸ್ಕಾರ್ಟ್ ವಾಹನ – ಕೇಸ್‌ ದಾಖಲು

0

ಹಾವೇರಿ : ಸರ್ಕಾರಿ ಬಸ್‌ಗೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಬೆಂಗಾವಲು ವಾಹ‌ನ ಗುದ್ದಿದ್ದು, ಎಸ್ಕಾರ್ಟ್ ವಾಹನದ ಮುಂಭಾಗವು ನುಜ್ಜುನುಜ್ಜಾದ ಘಟನೆ ಹಾವೇರಿಯಲ್ಲಿ ನಡೆದಿದೆ.

ನಗರದ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದ ಕಡೆಗೆ ಹೊರಟ್ಡಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಎಸ್ಕಾರ್ಟ್ ವಾಹನದ ಚಾಲಕ ಚನ್ನಬಸಪ್ಪ ಅರ್ಚಕ್ ವಿರುದ್ಧ ದೂರು ದಾಖಲಾಗಿದೆ.

ಅತೀವೇಗದ ಚಾಲನೆಯಿಂದ ಬಸ್‌ನ ಹಿಂಬದಿಗೆ ಗುದ್ದಿದ್ದಾನೆ ಎನ್ನಲಾಗಿದೆ. ಎಸ್ಕಾರ್ಟ್ ವಾಹನದ ಮುಂದಿನ ಭಾಗ ಮತ್ತು ಬಸ್ ನ ಹಿಂದಿನ ಭಾಗ ಸಂಪೂರ್ಣ ಹಾನಿಯಾಗಿದೆ. ಬಸ್ ಹಾವೇರಿಯಿಂದ ಗದಗ ಹೊರಟ್ಟಿದ್ದ ಬಸ್ ಎನ್ನಲಾಗಿದೆ.

ಬಸ್ KA-27 F0726 ಸಂಖ್ಯೆ ಬಸ್ ಗೆ ಹಿಂದಿನಿಂದ ವೇಗವಾಗಿ ಎಸ್ಕಾರ್ಟ್ ಡಿಕ್ಕಿ ಹೊಡೆದಿದ್ದಾನೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.