ಬೆಂಗಳೂರು : ಕೊಲ್ಲಿ ರಾಷ್ಟ್ರಗಳ ಯುದ್ಧ ರಾಜ್ಯ ಸಾರಿಗೆ ಮೇಲೆ ಪರಿಣಾಮ ಬೀರಿದೆ. ಆಟೋಗಳ ನಂತರ ಲಾರಿ, ಮಿನಿ ಗೂಡ್ಸ್ ವಾಹನ ಸಂಚಾರಕ್ಕೂ ಸಂಚಕಾರ ತಂದಿದೆ. ಇದ್ರಿಂದಾಗಿ ಸರಕು ವಾಹನಗಳ ಬಾಡಿಗೆ ದರ ಹೆಚ್ಚಾಗಿದೆ.
ಗಲ್ಫ್ ರಾಷ್ಟ್ರಗಳ ಕದನದ ಎಫೆಕ್ಟ್ ನಿಂದ ರಾಜ್ಯದಲ್ಲಿ ತೈಲ ಅಭಾವ ತಲೆದೋರಿದೆ. ಆಟೋ ಚಾಲಕರಂತೂ ಎಲ್ಪಿಜಿ ಸಿಲಿಂಡರ್ಗಾಗಿ ಕಿಲೊಮೀಟರ್ ಗಟ್ಟಲೇ, ಗಂಟೆಗಟ್ಟಲೆ ಕ್ಯೂ ನಿಲ್ಲೋ ಪರಸ್ಥಿತಿ ನಿರ್ಮಾಣವಾಗಿದೆ.
ಆಟೋಗಳ ನಂತರ ಇದೀಗ ಲಾರಿಗಳಿಗೂ ಇದ್ರ ಎಫೆಕ್ಟ್ ತಟ್ಟಿದೆ. ಇಡೀ ದೇಶದಲ್ಲಿ ಲಾರಿ, ಗೂಡ್ಸ್, ಮಿನಿ ವೆಹಿಕಲ್ಸ್ ಗಳಲ್ಲಿ 10-12% ಸಿಎನ್ ಜಿ, ಎಲ್ಎನ್ಜಿ ವಾಹನಗಳಿವೆ. ಈ ವಾಹನಗಳನ್ನು ತುಂಬಿಸಲು ಗಂಟೆಗಟ್ಟಲೆ ಕಾಯೋ ಪರಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಸುಮಾರು 5 ಲಕ್ಷದಷ್ಟು ಲಾರಿ, ಗೂಡ್ಸ್, ಪ್ಯಾಸೆಂಜರ್, ಕರ್ಮಷಿಯಲ್ ಸೆಗ್ಮೆಂಟ್ ವಾಹನಗಳಿವೆ. ಆದ್ರೇ ಒಂದು ತಿಂಗಳಿನಿಂದ ಈ ವಾಹನಗಳ ಸಂಖ್ಯೆಯಲ್ಲಿ ಶೇಕಡಾ 10% ನಷ್ಟು ವಾಹನಗಳ ಸಂಚಾರದಲ್ಲಿ ಸ್ಥಗಿತವಾಗಿದ್ದು ನಿಂತಲ್ಲೇ ನಿಂತಿವೆ.
ರಾಜ್ಯದ ಮುಖ್ಯ ನಗರಗಳಲ್ಲಿ ಡಿಸೇಲ್ ದೊರಕುತ್ತಿದೆ. ಆದ್ರೇ ಜಿಲ್ಲೆಗಳಲ್ಲಿ ಡಿಸೇಲ್ ಸರಿಯಾಗಿ ದೊರಕುತ್ತಿಲ್ಲ. ಜೊತೆಗೆ ರಸ್ತೆಯ ಹೈವೆಗಳ ಬಂಕ್ ಗಳಲ್ಲಿಯೂ ಡಿಸೇಲ್ ಸಿಗ್ತಿಲ್ಲ. ಹೀಗಾಗಿ ಶೇಕಡಾ 10% ನಷ್ಟು ಲಾರಿಗಳು ನಿಂತಲ್ಲೇ ನಿಂತಿವೆ.
ಆದ್ರೇ ದಿನನಿತ್ಯದ ಅಗತ್ಯಕ್ಕಾಗಿ, ಪುಡ್ ಇಂಡಸ್ಟ್ರಿಗೆ ಬೇಕಾಗೋ ವಾಹನಗಳ ಸಂಖ್ಯೆಯಲ್ಲಿ ಕೊರತೆ ಉಂಟಾಗಿದೆ. ಜೊತೆಗೆ ಸರಕು-ಸಾಗಾಣಿಕೆ ವೆಚ್ಚವೂ ಹೆಚ್ಚಾಗಿರೋ ಹಿನ್ನಲೆ ಗೂಡ್ಸ್ ವೆಹಿಕಲ್ಸ್ ಗಳ ಬಾಡಿಗೆಯನ್ನು 10-25% ಹೆಚ್ಚಳ ಮಾಡಲಾಗಿದೆ ಎನ್ನುತ್ತಿದೆ ಲಾರಿ ಮಾಲೀಕರ ಒಕ್ಕೂಟವಾಗಿದೆ.













