ಮನೆ ಸುದ್ದಿ ಜಾಲ ಹಾರ್ಮುಜ್‌ಗೆ ಬಂದ್ರೆ ಕತೆ ಮುಗಿಸಿಬಿಡ್ತೀನಿ – ದಿಗ್ಬಂಧನ ಮುರಿಯುವ ಯಾವ್ದೇ ಪ್ರಯತ್ನ ಬೇಡ – ಟ್ರಂಪ್‌

ಹಾರ್ಮುಜ್‌ಗೆ ಬಂದ್ರೆ ಕತೆ ಮುಗಿಸಿಬಿಡ್ತೀನಿ – ದಿಗ್ಬಂಧನ ಮುರಿಯುವ ಯಾವ್ದೇ ಪ್ರಯತ್ನ ಬೇಡ – ಟ್ರಂಪ್‌

0

ಟೆಹ್ರಾನ್/ವಾಷಿಂಗ್ಟನ್‌ : ಇರಾನ್‌ ಜೊತೆಗಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಹಾರ್ಮುಜ್‌ ಜಲಸಂಧಿಯ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಎಲ್ಲ ಬಂದರುಗಳಿಗೆ ಸೋಮವಾರದಿಂದ ಅಮೆರಿಕ ದಿಗ್ಬಂಧನ ವಿಧಿಸಿದೆ. ಇದು ಜಾರಿಯಾಗುತ್ತಿದ್ದಂತೆಯೇ, ಇರಾನ್‌ನ ಯಾವುದೇ ಹಡಗು ಹಾರ್ಮುಜ್‌ ಜಲಸಂಧಿ ದಾಟದಂತೆ ಎಚ್ಚರಿಕೆ ನೀಡಿದ್ದಾರೆ.

ನಾವು ವಿಧಿಸಿರುವ ದಿಗ್ಬಂಧನದ ಮುರಿಯುವ ಯಾವುದೇ ಪ್ರಯತ್ನವನ್ನು ಇರಾನ್‌ ಮಾಡಬಾರದು, ಒಂದು ವೇಳೆ ಇರಾನ್‌ ಹಾರ್ಮುಜ್‌ಗೆ ಬಂದ್ರೆ, ಪ್ರದೇಶ ಪ್ರವೇಶಿಸಲು ಇರಾನ್‌ನ ಯುದ್ಧನೌಕೆಗಳು ಯತ್ನಿಸಿದ್ರೆ ಕತೆ ಮುಗಿಸಿಬಿಡ್ತೀವಿ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಇರಾನ್ ಕೂಡ ತಿರುಗೇಟು ನೀಡಿದೆ. ನಮ್ಮ ಬಂದರುಗಳಿಗೆ ದಿಗ್ಬಂಧನ ವಿಧಿಸುವ ಅಮೆರಿಕದ ಕ್ರಮವನ್ನ ಕಡಲ್ಗಳ್ಳತನ ಎಂದು ಭಾವಿಸಲಾಗುವುದು ಮತ್ತು ಇದಕ್ಕೆ ಪ್ರತಿಯಾಗಿ ಕೊಲ್ಲಿ ದೇಶಗಳ ಯಾವ ಬಂದರುಗಳೂ ಸುರಕ್ಷಿತವಾಗಿ ಇರಲು ಬಿಡುವುದಿಲ್ಲ ಎಂದು ಇರಾನ್ ಪ್ರತಿದಾಳಿ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದಿದ್ದ ಶಾಂತಿ ಮಾತುಕತೆ ಮುರಿದುಬಿದ್ದ ಬಳಿಕ ಟ್ರಂಪ್ ಪ್ರತಿಕ್ರಿಯಿಸಿ, ಹೊರ್ಮುಜ್‌ ಜಲಸಂಧಿಗೆ ದಿಬ್ಬಂಧನ ಹಾಕಲಾಗುವುದು ಎಂದು ಬೆದರಿಕೆ ಒಡ್ಡಿದ್ದರು. ‘ಇರಾನ್‌ನ ಬಂದರುಗಳಿಂದ ಯಾವುದೇ ದೇಶದ ಹಡಗುಗಳಿಗೆ ಹೊರಬರಲು ಅಥವಾ ಬೇರೆ ಕಡೆಗಳಿಂದ ಇರಾನ್ ಬಂದರು ತಲುಪಲು ಬಿಡುವುದಿಲ್ಲ ಎಂದು ಅಮೆರಿಕ ಸೇನೆ ಹೇಳಿತ್ತು. ಇರಾನ್ ಕಾಲಮಾನ ಸೋಮವಾರ ಸಂಜೆ 5.30 ರಿಂದ ದಿಗ್ವಂಧನ ಜಾರಿಗೆ ಬಂದಿದೆ.

ಇರಾನ್‌ನ ರಫ್ತುಗಳನ್ನು ತಡೆದು ದೇಶದ ಆದಾಯದ ಹರಿವನ್ನ ತಡೆಯುವುದು ಟ್ರಂಪ್ ಅವರ ಪ್ಲ್ಯಾನ್. ಇರಾನ್‌ನಿಂದ ಚೀನಾವು ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿಸುತ್ತದೆ. ಜಲಸಂಧಿಗೆ ದಿಬ್ಬಂಧನ ಹಾಕುವ ಮೂಲಕ ಚೀನಾದ ಮೇಲೆ ಒತ್ತಡ ಹೇರುವುದು, ಆ ಮೂಲಕ ಇರಾನ್‌ನ ಮೇಲೆ ಒತ್ತಡ ಬರುವಂತೆ ಮಾಡುವುದು ಅಮೆರಿಕದ ಮಾಸ್ಟರ್‌ ಪ್ಲ್ಯಾನ್‌ ಎನ್ನಲಾಗಿದೆ. ಸೋಮವಾರ ಒಂದೇ ದಿನ ಅಮೆರಿಕ ದಿಗ್ಬಂಧನ ವಿಧಿಸಿದ್ದರಿಂದ ಇರಾನ್‌ಗೆ ,000 ಕೋಟಿ ರೂ. ಸಂಪತ್ತು ನಷ್ಟವಾಗಿದೆ.

ಚೀನಾ ಸೇರಿದಂತೆ ಕೆಲವು ಮಿತ್ರ ದೇಶಗಳ ಹಡಗುಗಳಿಗೆ ಮಾತ್ರವೇ ಹಾರ್ಮುಜ್ ಜಲಸಂಧಿ ದಾಟಲು ಇರಾನ್ ಅನುವು ಮಾಡಿಕೊಡುತ್ತಿತ್ತು. ಜಲಸಂಧಿಗೆ ದಿಗ್ಬಂಧನ ಹಾಕುವ ಅಮೆರಿಕದ ಕ್ರಮಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಇದೇ ಮಂಗಳವಾರ ಮತ್ತು ಬುಧವಾರ ನಾನು ಚೀನಾಕ್ಕೆ ಭೇಟಿ ನೀಡಲಿದ್ದೇನೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾರ್ವೊ ಹೇಳಿದ್ದಾರೆ.

ಅಮೆರಿಕ ದಿಗ್ಬಂಧನ ಹೇಳಿಕೆ ಬೆನ್ನಲ್ಲೇ ಹಾರ್ಮುಜ್‌ ಜಲಸಂಧಿ ನಮ್ಮ ನಿಯಂತ್ರಣದಲ್ಲೇ ಇದೆ ಎಂದು ನಮ್ಮ ಅಸ್ತಿತ್ವ ಕಡೆಗಣಿಸಿ ಜಲಸಂಧಿಯನ್ನು ದಾಟಲು ಮುಂದಾದರೆ ಗಂಭೀರವಾದ ಮತ್ತು ಅಪಾಯಕಾರಿ ಪರಿಸ್ಥಿತಿ ಎದುರಾಗಲಿದೆ. ಸೇನಾ ಹಡಗುಗಳು ಇಲ್ಲಿ ಇರುವಂತಿಲ್ಲ. ಒಂದು ವೇಳೆ ಅಂಥ ಹಡಗುಗಳು ಕಂಡರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಇರಾನ್‌ನ ಐಆರ್‌ಜಿಸಿ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿದೆ.