ಮಂಡ್ಯ : ಮನೆಯವರ ವಿರೋಧದ ನಡುವೆಯೂ ಅವನೇ ಬೇಕೆಂದು ಕಾಡಿಸಿ ಪೀಡಿಸಿ ಮದ್ವೆಯಾಗಿದ್ದ ಮಹಿಳೆ, ಈಗ ತಾಳಿಕಟ್ಟಿದ ಗಂಡನನ್ನ ಬಿಟ್ಟು ಮತ್ತೊಬ್ಬನ ಕೈಹಿಡಿದಿದ್ದಾಳೆ. ಮದುವೆಯಾದ 2 ವರ್ಷಕ್ಕೆ ಪ್ರೀತಿಸಿ ಗಂಡನನ್ನ ಬಿಟ್ಟು ತಂಗಿ ತಂಗಿ ಅಂತ ಕರೆಯುತ್ತಿದ್ದ ಗಂಡನ ಸ್ನೇಹಿತನನ್ನೇ ಪಟಾಯಿಸಿಕೊಂಡು ಓಡಿ ಹೋಗಿ ಮತ್ತೊಂದು ಮದುವೆಯಾಗಿದ್ದಾಳೆ. ಮಂಡ್ಯದಲ್ಲಿ ಈ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನ್ನಂಗಾಡಿಯ ಸಾಗರ್ ಹಾಗೂ ಹರವು ಗ್ರಾಮದ ಮಹಿಳೆ. ಕಳೆದ 4-5 ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿ 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ಮನೆಯಿಂದ ಎಸ್ಕೇಪ್ ಆಗಿ ಗಂಡನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡು 2ನೇ ಮದುವೆ ಆಗಿದ್ದಾಳೆ. ಸಾಗರ್ ವೃತ್ತಿಯಲ್ಲಿ ಆಟೋ ಚಾಲಕ. ತನ್ನೂರಿನಿಂದ ಪಾಂಡವಪುರಕ್ಕೆ ಆಟೋ ಓಡಿಸಿಕೊಂಡು ಜೀವನ ಮಾಡ್ತಿದ್ದ. ಆದ್ರೆ ಅದೇ ಮಾರ್ಗದಲ್ಲಿ ಕಾಲೇಜಿಗೆ ಹೋಗ್ತಿದ್ದ ಈಕೆ ಹದಿಹರೆಯದ ವಯಸ್ಸಿನಲ್ಲೆ ಪ್ರೀತಿ ಎಂದು ಈತನ ಹಿಂದೆ ಬಿದ್ದಿದ್ದಳು.
ಬೇರೆ ಆಟೋ ಇದ್ದರೂ ಈತನ ಆಟೋದಲ್ಲೆ ಹೋಗೋಕೆ ಕಾದು ಕುಳಿತುಕೊಳ್ತಿದ್ದಳು. ಹೀಗೆ ಆರಂಭವಾದ ಇವರ ಸ್ನೇಹ ಕೊನೆಗೆ ಪ್ರೀತಿಯಾಗಿ ಮದುವೆ ಹಂತಕ್ಕೂ ಹೋಗಿತ್ತು. ಸಾಗರ್ ನ ಮನೆಗೆ ಏಕಾಏಕಿ ಹೋದ ರಕ್ಷಿತ ಮದುವೆಯಾಗೋಣಾ ಬಾ ಎಂದು ಪಟ್ಟು ಹಿಡಿದ್ದಳು. ಅತ್ತ ತವರು ಮನೆಯವರು ಇಂತಹ ಮಗಳು ನಮಗೆ ಬೇಡ ಎಂದಿದ್ದರು. ರಕ್ಷಿತಾಗೆ 18 ವರ್ಷ ತುಂಬದ ಹಿನ್ನಲೆ ಸಾಗರ್ ಆಕೆಯನ್ನ ಅಕ್ಕನ ಮನೆಯಲ್ಲಿ ಇರಿಸಿ ಕೊನೆಗೆ 18 ವರ್ಷ ತುಂಬಿದ ಬಳಿಕ ದೇವಸ್ಥಾನದಲ್ಲಿ ಮದುವೆಯಾಗಿದ್ದ. ಕೆಲ ದಿನಗಳು ಸುಮ್ಮನಿದ್ದ ಆಕೆ ಮತ್ತೊಬ್ಬ ಯುವಕ ಇಂದ್ರ ಎಂಬಾತನ ಪ್ರೀತಿಯ ಗಾಳಕ್ಕೆ ಸಿಲುಕಿದ್ದಳು. ಇಂದ್ರ ಪೋನ್ ಕಾಲ್, ಮೆಸೇಜ್ ನಲ್ಲಿ ಆಕೆಗೆ ಚಂದ್ರಲೋಕ ತೋರಿಸಿ ಆಕೆಯನ್ನ ಪ್ರೀತಿ ಬಲೆಗೆ ಬೀಳಿಸಿದ್ದ.
ಇಂದ್ರ, ಗೃಹಿಣಿಯ ಗಂಡ ಸಾಗರ್‌ನ ಆತ್ಮೀಯ ಸ್ನೇಹಿತನೇ. ಆತನೊಂದಿಗೆ ಆಟೋ ಓಡಿಸಿಕೊಂಡೆ ಜೀವನ ಮಾಡ್ತಿದ್ದ. ಇಂದ್ರ ಆಗಾಗ ಸಾಗರ್ ನ ಮನೆಗೆ ಬರ್ತಿದ್ದರಿಂದ ಸಾಗರ್‌ನ ಹೆಂಡತಿ ಕೂಡ ಆತನಿಗೆ ಪರಿಚಯ ಆಗಿದ್ದಳು. ಇನ್ನೂ ಮನೆಯವರ ಮುಂದೆಲ್ಲ ಆತ ಸಾಗರನ ಹೆಂಡ್ತಿಯನ್ನ ತಂಗಿ ತಂಗಿ ಅಂತಾನೆ ಅಂತಿದ್ದ. ನನಗೆ ತಂಗಿಯಿಲ್ಲ, ಇವಳೆ ನನಗೆ ತಂಗಿ ಅಂತಿದ್ದ. ರಕ್ಷಾ ಬಂಧನದ ಸಂದರ್ಭ ಆಕೆಗೆ ಶುಭಕೋರಿದ. ಆದ್ರೆ ಅದೆಲ್ಲ ಮನೆಯವರ ಮುಂದೆ ಆಡುತ್ತಿದ್ದ ನಾಟಕ. ಫೋನ್‌ನಲ್ಲಿ ಪ್ರೀತಿ ಪ್ರಣಯದ ಮಾತುಗಳನ್ನ ಆಡ್ತಿದ್ದ ಅವರಿಬ್ಬರು ಏಕಾಏಕಿ ಓಡಿ ಹೋಗಿ ಮದುವೆಯಾಗಿದ್ದಾರೆ.
ಇತ್ತ ಹೆಂಡತಿ ಮತ್ತೊಬ್ಬನ ಜೊತೆ ಮದುವೆಯಾಗಿರುವ ಪೋಟೋ ನೋಡಿ ದಿಗ್ಭ್ರಮೆಗೊಂಡಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ ಸಾಗರ್. ಆಕೆ ಮನೆಯಲ್ಲಿದ್ದ 22 ಗ್ರಾಂ ಒಡವೆ, 1 ಲಕ್ಷ ನಗದು ತೆಗೆದುಕೊಂಡು ಹೋಗಿದ್ದು ನನಗೆ ವಾಪಸ್ಸು ಕೊಡಿಸಿ, ಆಕೆಯಿಂದ ಡಿವೋರ್ಸ್ ಕೊಡಿಸಿ ಎಂದು ಮನವಿ ಮಾಡ್ತಿದ್ದಾನೆ. ಇತ್ತ ಸಾಗರ್ ನ ತಾಯಿ ಸೊಸೆ ಮಾಡಿದ ದ್ರೋಹ ನೆನೆದು ಕಣ್ಣೀರು ಹಾಕ್ತಿದ್ದಾರೆ.














