ಮನೆ ರಾಜ್ಯ ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ

ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ

0

ಬೆಂಗಳೂರು : ರಾಜ್ಯದಲ್ಲಿ ಏ.29ರವರೆಗೆ ಹಾಗೂ ಬೆಂಗಳೂರಿನಲ್ಲಿ ಮೇ 5ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಬೇಗೆಯಿಂದ ಬಳಲುತ್ತಿರುವ ರಾಜ್ಯದ ಜನರಿಗೆ ವರುಣ ದೇವ ತಂಪೆರೆಯುವ ಸಾಧ್ಯತೆಯಿದೆ. ಕರಾವಳಿ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಏ.29ರವರೆಗೆ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಇದರ ನಡುವೆ ಬೆಂಗಳೂರಿಗರಿಗೂ ಬೆಂಕಿ ಬಿಸಿಲಿನಿಂದ ಕೊಂಚ ರಿಲೀಫ್ ಸಿಗೋ ಸಾಧ್ಯತೆಯಿದೆ. ಏ.28ರಿಂದ ಮೇ 5ರವರೆಗೆ ಭಾರೀ ಗಾಳಿ, ಮಳೆಯಾಗಲಿದೆ ಎನ್ನಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ವಿಪರೀತ ಸೆಕೆ, ಏರಿದ ಉಷ್ಣಾಂಶದಿಂದ ರಾಜಧಾನಿ ಜನ ಬಸವಳಿದಿದ್ದಾರೆ. ಈ ಮಳೆಯ ಸಿಂಚನದಿಂದಾದ್ರೂ ಇಳೆ ತಂಪಾಗಿ, ವಾತಾವರಣ ಕೂಲ್ ಆಗಲಿ ಎನ್ನುವಂತಾಗಿದೆ.