ಮನೆ ಸುದ್ದಿ ಜಾಲ ಇರಾನ್‌ಗೆ ವಾರ್ನಿಂಗ್ ಕೊಟ್ಟ ಟ್ರಂಪ್‌; ಮಷಿನ್‌ ಗನ್‌ ಹಿಡಿದ ಎಐ ಫೋಟೋ ಹಾಕಿ ಟ್ವೀಟ್..!

ಇರಾನ್‌ಗೆ ವಾರ್ನಿಂಗ್ ಕೊಟ್ಟ ಟ್ರಂಪ್‌; ಮಷಿನ್‌ ಗನ್‌ ಹಿಡಿದ ಎಐ ಫೋಟೋ ಹಾಕಿ ಟ್ವೀಟ್..!

0

ವಾಷಿಂಗ್ಟನ್‌ : ವಾಷಿಂಗ್ಟನ್‌  ಇರಾನ್‌ ಮತ್ತು ಅಮೆರಿಕದ ನಡುವಿನ ಶಾಂತಿ ಮಾತುಕತೆಗೆ ಮುಹೂರ್ತವೇ ಕೂಡಿಬರದಿರುವುದು ಹಾಗೂ ನಡೆದ ಸಭೆಗಳೆಲ್ಲಾ ವಿಫಲವಾಗಿರುವುದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಸಮಾಧಾನವನ್ನು ಹೆಚ್ಚಿಸಿದೆ. ಇದೀಗ ‘ನಾನಿನ್ನು ಒಳ್ಳೆಯವನಾಗಿ ಇರೋದಿಲ್ಲ. ನೀವು ಬೇಗ ಸ್ಮಾರ್ಟ್‌ ಆಗಿ’ ಎಂಬ ಪೋಸ್ಟ್‌ನೊಂದಿಗೆ, ತಾವು ಯುದ್ಧಭೂಮಿಯಲ್ಲಿ ಮಷಿನ್‌ಗನ್‌ ಹಿಡಿದು ನಿಂತಿರುವಂತಹ ಎಐ ಚಿತ್ರವನ್ನು ಡೊನಾಲ್ಡ್‌ ಟ್ರಂಪ್‌  ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಜತೆಗೆ, ‘ಇರಾನ್‌ಗೆ ಯಾವುದೇ ಕೆಲಸವನ್ನು ಸಂಘಟಿತವಾಗಿ, ಫಲಪ್ರದವಾಗಿ ಮಾಡಲು ಬರುವುದೇ ಇಲ್ಲ. ಅಣ್ವಸ್ತ್ರದ ಗುರಿ ಬಿಟ್ಟು ಡೀಲ್‌ ಮಾಡಿಕೊಳ್ಳುವುದು ಹೇಗೆಂದು ಅವರಿಗೆ ತಿಳಿದಿಲ್ಲ. ಅವರು ಈ ವಿಷಯದಲ್ಲಿ ಆದಷ್ಟು ಬೇಗ ಬುದ್ದಿವಂತರಾಗಿ ಜಾಣತನ ತೋರುವುದು ಒಳಿತು’ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ .

ಹೋರ್ಮುಜ್‌ನಲ್ಲಿ ತನ್ನ ಹಡಗುಗಳಿಗೆ ಹೇರಿರುವ ನಿರ್ಬಂಧ ತೆಗೆದುಹಾಕಿದರೆ ತಾನು ಕೂಡ ಜಲಸಂಧಿಯನ್ನು ಮುಕ್ತ ಮಾಡುವುದಾಗಿ ಹೇಳಿದ್ದ ಇರಾನ್‌, 3 ಹಂತದ ಚರ್ಚೆಯ ಪ್ರಸ್ತಾಪ ಮುಂದಿಟ್ಟಿತ್ತು. ಅದರಲ್ಲಿ ಮೊದಲ ಎರಡು ಹಂತದ ಚರ್ಚೆಯ ಅಂಶಗಳಿಗೆ ಅಮೆರಿಕ ಒಪ್ಪಿಕೊಂಡರೆ ಮಾತ್ರವೇ ಮೂರನೇ ಹಂತದಲ್ಲಿ ಅಣ್ವಸ್ತ್ರ ವಿಷಯದ ಚರ್ಚೆ ಮಾಡುವುದಾಗಿ ಸಾಧ್ಯ ಎಂದು ಹೇಳಿತ್ತು. ಆದರೆ ಅದನ್ನು ಇದೀಗ ಟ್ರಂಪ್‌ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂಬ ಮಾಹಿತಿ ಬಂದಿದೆ.