ಬೆಂಗಳೂರು ಟಿ.ದಾಸರಹಳ್ಳಿಯ ಹೆಸರಘಟ್ಟ ರಸ್ತೆಯಲ್ಲಿರುವ ಎಂ.ಬಿ. ಜ್ಯುವೆಲ್ಲರ್ಸ್ ಮಳಿಗೆಯ ಹಿಂಭಾಗದ ಗೋಡೌನ್ ಗೋಡೆ ಕೊರೆದು ಒಳನುಗ್ಗಿದ ಖದೀಮರು, ಬರೋಬ್ಬರಿ 70 ಕೆಜಿ ಬೆಳ್ಳಿ ಸೇರಿದಂತೆ ಸುಮಾರು 1.20 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳಳತನ ಮಾಡಿರುವ ಘಟನೆ ಬೆಳಕ್ಕಿಗೆ ಬಂದಿದೆ.
ಜೆ.ಮಹೇಂದ್ರ ಕುಮಾರ್ (ಅಂಗಡಿ ಮಾಲೀಕರು) ಎಂಬವರು ಹಾವನೂರು ಬಡಾವಣೆಯ ಆರ್‌ಎಸ್‌ಕೆ ವಾಣಿಜ್ಯ ಸಮುಚ್ಚಯದಲ್ಲಿ ಎಂ.ಬಿ. ಜ್ಯುವೆಲರ್ಸ್ ಚಿನ್ನಾಭರಣ ಮಳಿಗೆ ಹೊಂದಿದ್ದಾರೆ ಎನ್ನಲಾಗಿದೆ. ಜೆ.ಮಹೇಂದ್ರ ಕುಮಾರ್ ಏಪ್ರಿಲ್ 27ರಂದು ವಹಿವಾಟು ಮುಗಿದ ಬಳಿಕ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೋಗಿದ್ದರು. ಎಂ.ಬಿ. ಜ್ಯುವೆಲರ್ಸ್ ಚಿನ್ನಾಭರಣ ಮಳಿಗೆಯ ಕಟ್ಟಡದ ಪಕ್ಕದಲ್ಲೇ ಸೆರಾಮಿಕ್ಸ್ ಅಂಗಡಿಯ ಗೋದಾಮು ಇದ್ದು ಅವತು ರಾತ್ರಿ ಕಳ್ಳರು ಸೆರಾಮಿಕ್ಸ್ ಗೋದಾಮಿನ ರೋಲಿಂಗ್ ಶೆಟರ್ನ ಬೀಗ ಒಡೆದು ಗೋದಾಮಿನ ಒಳಗೆ ನುಗ್ಗಿದ್ದಾರೆ. ನಂತರ ಗೋದಾಮಿನ ಒಳ ಭಾಗದಿಂದ ಚಿನ್ನಾಭರಣ ಮಳಿಗೆಯ ಗೋಡೆ ಕೊರೆದು ಒಳನುಗ್ಗಿ70 ಕೆಜಿ ಬೆಳ್ಳಿ ಸಾಮಗ್ರಿ, ಲ್ಯಾಪ್‌ಟಾಪ್, ಮೊಬೈಲ್ ಫೋನ್, ಡಿವಿಆರ್ ಹಾಗೂ ಕ್ಯಾಶ್ ಬಾಕ್ಸ್‌ಲ್ಲಿದ್ದ 1500 ರೂ. ನಗದು ದೋಚಿದ್ದಾರೆ. ಜ್ಯುವೆಲ್ಲರ್ಸ್ ಮಾಲೀಕ ಮಹೇಂದ್ರ ಕುಮಾರ್, ಏಪ್ರಿಲ್ 28ರಂದು ಬೆಳಗ್ಗೆ ಅಂಗಡಿ ತೆರೆದಾಗ, ಕಳ್ಳತನ ನಡೆದಿರುವ ವಿಚಾರ ತಿಳಿದು ಬಂದಿದೆ ಎನ್ನಲಾಗಿದೆ. ಈ ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದರಿಂದ ಆರ್‌ಎಸ್‌ಕೆ ವಾಣಿಜ್ಯ ಸಮುಚ್ಚಯದಲ್ಲಿ ಮಹೇಂದ್ರ ಕುಮಾರ್, 14 ವರ್ಷಗಳಿಂದ ಚಿನ್ನಾಭರಣ ಮಳಿಗೆ ನಡೆಸುತ್ತಿದ್ದರು. ಈ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಬೆಳ್ಳಿಗ್ಗೆ ಸಮಯದಲ್ಲಿ ಮಾತ್ರ ಸೆಕ್ಯೂರಿಟಿ ಗಾರ್ಡ್ ಇರಿಸಲಾಗಿತ್ತು ಎನ್ನಲಾಗಿದೆ . ಮಳಿಗೆಯ ಒಳ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ, ಆದರೆ ತಾಂತ್ರಿಕ ಕಾರಣಗಳಿಂದ ಅದು ಕೆಲಸ ಮಾಡುತ್ತಿಲ್ಲ ಎಂಬ ವಿಷಯ ತಿಳಿದು ಬಂದಿದೆ ಎನ್ನಲಾಗಿದೆ.














