ಬೆಂಗಳೂರು ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 2.30ರ ವೇಳೆಗೆ ನಿಧನರಾಗಿದ್ದಾರೆ ಎನ್ನಲಾಗಿದೆ. ಲಾವಣ್ಯ ಎನ್. ಮೃತ ಮಹಿಳಾ ಅಧಿಕಾರಿಯಾಗಿದ್ದು. ಲಾವಣ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿತ್ತು.
ಲಾವಣ್ಯ ಅವರು ಬೆಸ್ಕಾಂ ವಿಜಿಲೆನ್ಸ್ ನಲ್ಲಿ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಲಾವಣ್ಯ ಅವರು ಕೊಲೊನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಲಾವಣ್ಯ ಅವರು 2010ರ ಬ್ಯಾಚ್‌ನ ಕೆಎಸ್‌ಪಿಎಸ್ ಅಧಿಕಾರಿಯಾಗಿದ್ದರು. ಮಂಡ್ಯ- ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ, ಬಳ್ಳಾರಿ- ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ, ಬೆಂಗಳೂರಿನಲ್ಲಿ ಇಂಟಲಿಜೆನ್ಸ್, ಬೆಂಗಳೂರಿನಲ್ಲಿ ಡಿಸಿಆರ್‌ಇ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ.2023 ರಿಂದ ಬೆಸ್ಕಾಂ ಎಸ್ಪಿಯಾಗಿದ್ದರು ಎನ್ನಲಾಗಿದೆ .
ಡಿಜಿ ಸಲೀಂ ಅವರು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಲಾವಣ್ಯ ಅವರ ವಿದ್ಯಾರಣ್ಯಪುರ ನಿವಾಸಕ್ಕೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದರು ಎನ್ನಲಾಗಿದೆ. ಮೃತ ಲಾವಣ್ಯ ಅವರಿಗೆ 39 ವಯಸ್ಸು ಆಗಿತ್ತು. ಲಾವಣ್ಯ N ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರಿನವರು. ಲಾವಣ್ಯ ಅವರು ಪತಿ, 10 ವರ್ಷದ ಮಗ,3 ವರ್ಷದ ಹೆಣ್ಣು ಮಗು ಅಗಲಿದ್ದಾರೆ ಎನ್ನಲಾಗಿದೆ.














