ಮನೆ ರಾಜ್ಯ ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ..!

ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ..!

0

ಮೈಸೂರು : ಕೆ.ಆರ್ ನಗರದ ತಾಲೂಕಿನ ಅರ್ಜುನಹಳ್ಳಿಯಲ್ಲಿ ಸಹೋದರರಿಬ್ಬರನ್ನು ಅಣ್ಣನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ರಾಘ ಹಾಗೂ ಹರ್ವ ಕೊಲೆಯಾದ ಸಹೋದರರು. ಅವರ ತಂದೆಯ ಮೊದಲ ಹೆಂಡತಿಯ ಮಗ ರೋಹಿತ್ ಕೊಲೆ ಆರೋಪಿಯಾಗಿದ್ದು, ಹಳೇ ವೈಷಮ್ಯ ಹಾಗೂ ಆಸ್ತಿ ವಿಚಾರಕ್ಕೆ ಸಹೋದರರನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಕೊಲೆಯಾದ ಸಹೋದರರ ತಾಯಿ ಪ್ರತಿಕ್ರಿಯಿಸಿದ್ದು,ಐದು ಕೋಟಿ ರೂಪಾಯಿ ಆಸ್ತಿಗಾಗಿ ಮಕ್ಕಳನ್ನ ಕೊಂದಿದ್ದಾರೆ. ಕೊಲೆಗಾರರಿಗೆ ಸೂಕ್ತ ಶಿಕ್ಷೆಯಾಗಬೇಕು. ಇನ್ನು ಎಲ್ಲಾ ಆಸ್ತಿ ಅನಾಥಾಶ್ರಮಕ್ಕೆ ಬರೆಯುತ್ತೇನೆ ಎಂದಿದ್ದಾರೆ.