ಮನೆ ಸುದ್ದಿ ಜಾಲ ‘ಜನ ನಾಯಗನ್’ ಸಿನಿಮಾ ಇನ್ನೆರಡು ವಾರಗಳಲ್ಲಿ ಬಿಡುಗಡೆ ಸಿದ್ದ: ನಿರ್ಮಾಪಕ ವೆಂಕಟ್ ನಾರಾಯಣ

‘ಜನ ನಾಯಗನ್’ ಸಿನಿಮಾ ಇನ್ನೆರಡು ವಾರಗಳಲ್ಲಿ ಬಿಡುಗಡೆ ಸಿದ್ದ: ನಿರ್ಮಾಪಕ ವೆಂಕಟ್ ನಾರಾಯಣ

0

ಚೆನ್ನೈ(ತಮಿಳುನಾಡು): ಬಹುನಿರೀಕ್ಷಿತ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರ ಮುಂದಿನ ಎರಡು ವಾರಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಪಕರು ಭಾನುವಾರ ದೃಢಪಡಿಸಿದ್ದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥಾಪಕ ವೆಂಕಟ್ ಕೆ ನಾರಾಯಣ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ)ಯಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಅಂತಿಮ ಪ್ರಮಾಣೀಕರಣ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ ಎಂದು ಹೇಳಿದರು ಎನ್ನಲಾಗಿದೆ.

ಈ ಕುರಿತು “ಅಂತಿಮ ಪ್ರಕ್ರಿಯೆಗಳು ನಡೆಯುತ್ತಿವೆ ಮತ್ತು ನಾವು ಅವರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ನಾವು ತುಂಬಾ ಸಂತೋಷ ಮತ್ತು ಉತ್ಸುಕರಾಗಿದ್ದೇವೆ. ‘ಜನ ನಾಯಗನ್’ ಸುಮಾರು 14 ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ನನಗೆ ವಿಜಯ್ ಸರ್ ಬಗ್ಗೆ ವೈಯಕ್ತಿಕವಾಗಿ ತಿಳಿದಿದೆ. ಅವರು ತುಂಬಾ ಶಿಸ್ತುಬದ್ಧ ಮತ್ತು ಸಮರ್ಪಿತ ಮತ್ತು ಅವರು ಏನು ಭರವಸೆ ನೀಡಿದ್ದರೋ ಅದನ್ನು ಪೂರೈಸುತ್ತಾರೆ. ಅವರು ಮಾತಿನಂತೆ ನಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಜಯ್ ನಾಯಕತ್ವದಲ್ಲಿ ತಮಿಳುನಾಡಿಗೆ “ಹೊಸ ಯುಗ” ದೊಂದಿಗೆ ಚಿತ್ರದ ಶೀರ್ಷಿಕೆ ಮತ್ತು ಥೀಮ್‌ಗಳು ಹೊಂದಿಕೆಯಾಗಬೇಕು ಎಂದು ಅವರು ಸಲಹೆ ನೀಡಿದರು. “ಹೊಸ ನಾಯಕತ್ವ, ಹೊಸ ಯುಗ ಪ್ರಾರಂಭವಾಗುತ್ತದೆ ಎಂದು ನಾನು ಭಾವಿಸುತ್ತೇನೆ.

ಅವರು ತಮಿಳುನಾಡಿನ ಜನರಿಗೆ ‘ಜನ ನಾಯಗನ್’ ಆಗಿ ಹೊರಹೊಮ್ಮಿದ್ದಾರೆ” ಎಂದು ನಿರ್ಮಾಪಕರು ತಿಳಿಸಿದರು. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಚಿತ್ರ ನಿರ್ಮಾಣ ಸಂಸ್ಥೆ ಎದುರಿಸುತ್ತಿರುವ ಇತ್ತೀಚಿನ ಸವಾಲುಗಳನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಿದರು, ಹಿಂದಿನ ಕೆಲವು ಘಟನೆಗಳನ್ನು “ದುರದೃಷ್ಟಕರ” ಎಂದು ಕರೆದರು. ಆದರೆ ತಂಡವು ಮುಂದುವರಿಯುವತ್ತ ಗಮನಹರಿಸಿದೆ ಎಂದು ಒತ್ತಿ ಹೇಳಿದರು. ‘ಜನ ನಾಯಗನ್’ ವಿಜಯ್ ಅವರ ವೃತ್ತಿಜೀವನದಲ್ಲಿ ಒಂದು ಪ್ರಮುಖ ಸಿನಿಮಾ ಆಗಿರುವುದರಿಂದ ಸಂಚಲನ ಸೃಷ್ಟಿಸಿದೆ, ಇದು ಅವರ ಇತ್ತೀಚಿನ ರಾಜಕೀಯ ಪರಿವರ್ತನೆಯೊಂದಿಗೆ ಹೊಂದಿಕೆಯಾಗುತ್ತದೆ ಎನ್ನಲಾಗಿದೆ.

ಇತ್ತೀಚೆಗೆ, ಚಲನಚಿತ್ರವು ಆನ್‌ಲೈನ್ ವೇದಿಕೆಗಳಲ್ಲಿ ಅಕ್ರಮವಾಗಿ ಸೋರಿಕೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸಹಾಯಕ ಎಡಿಟರ್​​ ಮತ್ತು ಇತರ ಹಲವರನ್ನು ಬಂಧಿಸಲಾಯಿತು. ಪ್ರಮಾಣೀಕರಣ ಪ್ರಕ್ರಿಯೆಯಲ್ಲಿನ ವಿಳಂಬದ ನಂತರ ಅಭಿಮಾನಿಗಳು ಮತ್ತು ತಮಿಳು ಸಿನಿಮಾ ರಂಗದ ಒಳಗಿನವರು ಯೋಜನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಹಿಂದೆ ‘ತೀರನ್ ಅಧಿಕಾರಂ ಆಂದ್ರು ‘, ‘ನೆರ್ಕೊಂಡ ಪಾರ್ವೈ’ ಮತ್ತು ‘ತುಣಿವು’ ಸಿನಿಮಾಗಳನ್ನು ನಿರ್ದೇಶನ ಮಾಡಿದ ಹೆಚ್ ವಿನೋತ್ ಅವರು ‘ಜನ ನಾಯಗನ್’ ಚಿತ್ರದ ನಿರ್ದೇಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ.