ಮನೆ ಅಪರಾಧ ಗರ್ಭಿಣಿ ಹೆಂಡತಿಯ ಗು*ಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ಪತಿಯಿಂದ ಭೀಕರ ಕೊಲೆ..!

ಗರ್ಭಿಣಿ ಹೆಂಡತಿಯ ಗು*ಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ಪತಿಯಿಂದ ಭೀಕರ ಕೊಲೆ..!

0

ಕೌಟುಂಬಿಕ ಹಿಂಸಾಚಾರದ ಅತ್ಯಂತ ಆಘಾತಕಾರಿ ಮತ್ತು ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ಛತ್ತೀಸ್‌ಗಢದಿಂದ ಬೆಳಕಿಗೆ ಬಂದಿದೆ. ಕೇವಲ 23 ವರ್ಷದ ಗರ್ಭಿಣಿ ಮಹಿಳೆಯನ್ನು ಆಕೆಯ ಪತಿಯೇ ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಭೀಕರ ಘಟನೆ ಅಂಬಿಕಾಪುರ ಬಳಿಯ ಸಕರಿಯಾ ಗ್ರಾಮದಲ್ಲಿ ನಡೆದಿದೆ. ​ಮೃತ ದುರ್ದೈವಿಯನ್ನು ಹೀರಾಬಾಯಿ (23) ಎಂದು ಗುರುತಿಸಲಾಗಿದ್ದು, ಈಕೆಯ ಪತಿ ಪ್ರದೀಪ್ ಅಗಾರಿಯಾ ಎಂಬಾತನೇ ಈ ಘೋರ ಕೃತ್ಯ ಎಸಗಿದ ರಾಕ್ಷಸ.

​ಪೊಲೀಸರು ಮತ್ತು ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಪ್ರದೀಪ್ ಕೊಲೆ ಮಾಡುವ ಮುನ್ನ ಹೆಂಡತಿಯ ಮೇಲೆ ಅತಿಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಗರ್ಭಿಣಿ ಎಂಬ ಕರುಣೆಯೂ ಇಲ್ಲದೆ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ವಿಕೃತಿ ಮೆರೆದಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವ ಉಂಟಾಗಿ, ಆಕೆ ನರಳಿ ನರಳಿ ಪ್ರಾಣ ಬಿಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮಹಿಳೆಯ ದೇಹದ ಮೇಲಿದ್ದ ಗಾಯಗಳು ಹಾಗೂ ಆಕೆಗೆ ನೀಡಲಾದ ಚಿತ್ರಹಿಂಸೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

​ಹೆಂಡತಿ ಮೃತಪಡುತ್ತಿದ್ದಂತೆ ಆತಂಕಗೊಂಡ ಆರೋಪಿ, ಇದೊಂದು ಅಪಘಾತ ಎಂದು ಬಿಂಬಿಸಲು ಹರಸಾಹಸ ಪಟ್ಟಿದ್ದಾನೆ. ಮೃತದೇಹವನ್ನು ತನ್ನ ಮೋಟಾರ್ ಸೈಕಲ್‌ನ ಹಿಂಭಾಗಕ್ಕೆ ಕಟ್ಟಿ, ಅಂಬಿಕಾಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ. ಆಸ್ಪತ್ರೆಯಲ್ಲಿದ್ದ ವೈದ್ಯರ ಬಳಿ “ಈಕೆಗೆ ಅಪಘಾತವಾಗಿದೆ” ಎಂದು ಸುಳ್ಳು ಕಥೆ ಕಟ್ಟಿದ್ದಾನೆ.

​ಆದರೆ, ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಅಷ್ಟರಲ್ಲೇ ತನ್ನ ಬಣ್ಣ ಬಯಲಾಗುವ ಭಯದಿಂದ ಆರೋಪಿ ಪ್ರದೀಪ್ ಆಸ್ಪತ್ರೆಯ ಆವರಣದಿಂದಲೇ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ನರಹಂತಕ ಪತಿಯ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ. ಹೆಂಡತಿ ಮತ್ತು ಹೊಟ್ಟೆಯಲ್ಲಿದ್ದ ಮಗುವನ್ನು ಕೊಂದ ಈ ಕ್ರೂರಿಯ ವಿಕೃತ ಮನಸ್ಥಿತಿಗೆ ಇಡೀ ರಾಜ್ಯವೇ ಆಕ್ರೋಶ ವ್ಯಕ್ತಪಡಿಸುತ್ತಿದೆ.