ಮನೆ ಅಪರಾಧ ಡಿಜಿಟಲ್ ಅರೆಸ್ಟ್‌; ನೆಪದಲ್ಲಿ ವೃದ್ಧೆಯಿಂದ 24 ಕೋಟಿ ಸುಲಿಗೆ..!

ಡಿಜಿಟಲ್ ಅರೆಸ್ಟ್‌; ನೆಪದಲ್ಲಿ ವೃದ್ಧೆಯಿಂದ 24 ಕೋಟಿ ಸುಲಿಗೆ..!

0

ಬೆಂಗಳೂರು : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೊಬ್ಬರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂ. ಸುಲಿಗೆ ಮಾಡಿದ್ದ ಅಂತರರಾಜ್ಯ ಖದೀಮರನ್ನು ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ವೃದ್ಧೆ ಮತ್ತಷ್ಟು ಹಣ ಕಳೆದು ಕೊಳ್ಳುವುದನ್ನು ಸಮಯಪ್ರಜ್ಞೆ ಯಿಂದ ತಪ್ಪಿಸಿದ ಬ್ಯಾಂಕ್ ಮ್ಯಾನೇಜರ್ ಅವರಿಂದ ಈ ಭಾರೀ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಶಿವಾಜಿನಗರದ ವೃದ್ಧೆಯೊಬ್ಬರು ಇತ್ತೀಚೆಗೆ ಆಸ್ತಿ ಮಾರಾಟದಿಂದ ಕೋಟ್ಯಂತರ ರೂ. ಹಣ ಹೊಂದಿ ದ್ದರು. ಸೈಬರ್ ವಂಚಕರು ವೃದ್ಧೆಯ ಬ್ಯಾಂಕ್ ವಹಿ ವಾಟಿನ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ವಂಚನೆಗೆ ಜಾಲ ಬೀಸಿದ್ದರು. ವೃದ್ಧೆಗೆ ಕರೆಮಾಡಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಹೆದರಿಸಿದ್ದರು. ಇದ ರಿಂದ ಭಯಗೊಂಡ ವೃದ್ಧೆ, ಕಳೆದ ಜನವರಿಯಿಂದ ಮೇ ತಿಂಗಳವರೆಗೂ ಹಂತ ಹಂತವಾಗಿ ಒಟ್ಟು 24 ಕೋಟಿ ಹಣವನ್ನು ಖದೀಮರು ಸೂಚಿಸಿದ ಖಾತೆ. ಇನ್ನಷ್ಟು ವಂಚನೆ ತಡೆದ ಬ್ಯಾಂಕ್ಮ್ಯಾನೇಜ‌ರ್, ವೃದ್ಧೆಯ ಅಮಾಯಕತೆ ಯನ್ನು ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಆಗ ಆ ವೃದ್ಧೆ ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನಾಭರಣಗಳನ್ನು ಆಡ ವಿಟ್ಟು ಹಣ ಪಡೆಯಲು ಬ್ಯಾಂಕ್‌ಗೆ ತೆರಳಿದ್ದರು. ಆ ವೇಳೆ ಬ್ಯಾಂಕ್ ಮ್ಯಾನೇಜರ್, ವೃದ್ಧೆಯ ವರ್ತನೆ ಹಾಗೂ ತಮ್ಮ ಖಾತೆಯಲ್ಲಿ ನಿರಂತರವಾಗಿ ದೊಡ್ಡ ಮೊತ್ತದ ವ್ಯವ ಹಾರ ನಡೆಸುತ್ತಿರುವುದನ್ನು ಗಮನಿಸಿ ಅನು ಮಾನಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಬ್ಯಾಂಕ್‌ಗೆ ಧಾವಿಸಿದ ಸಿಸಿಬಿ ಸೈಬರ್ ಪೊಲೀಸರು, ವೃದ್ಧೆಯನ್ನು ವಿಚಾರಣೆಗೊಳಪಡಿಸಿದರು. ಅದಾಗಲೇ ಭಯದಲ್ಲಿದ್ದ ವೃದ್ಧೆ ಪೊಲೀಸರ ಬಳಿ ಏನೂ ಹೇಳದೆ ಮೌನವಾಗಿದ್ದರು.

ಬಳಿಕ ಪೊಲೀಸರು ಧೈರ್ಯ ತುಂಬಿ ವಿಚಾ ರಿಸಿದಾಗ ಡಿಜಿಟಲ್ ಅರೆಸ್ಟ್ ವಿಚಾರವನ್ನು ಬಾಯ್ದಿಟ್ಟಿದ್ದಾರೆ. ಪೊಲೀಸರು ಇಂತಹ ಯಾವುದೇ ಕ್ರಮ ನಡೆಸುವುದಿಲ್ಲ. ನಿಮ್ಮನ್ನು ಸೈಬರ್ ಖದೀಮರು ಬೆದರಿಸಿ, ವಂಚಿಸಿದ್ದಾರೆ ಎಂದು ತಿಳಿಸಿ, ಸಂತ್ರಸ್ತೆಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ವಿದೇಶದಲ್ಲಿರುವ ಸಂತ್ರಸ್ಥೆಯ ಮಕ್ಕಳಿಗೂ ಮಾಹಿತಿ ನೀಡಿದರು. ಹೆಡೆಮುರಿ ಕಟ್ಟಿದ ಪೊಲೀಸರು, ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗಿಳಿದ ಪೊಲೀಸರು ಮುಂಬೈ, ಅಲಹಾಬಾದ್ ಮತ್ತು ದೆಹಲಿ ಮೂಲದ ಆರೋಪಿಗಳು ಎಂದು ತಿಳಿದುಬಂದಿದೆ.