ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಕ್ವಾಲಿಫೈಯರ್ 2ರಲ್ಲಿ ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿರುವುದು ಗೊತ್ತಿರುವ ವಿಷಯ. ಆದಾಗ್ಯೂ, ರಾಜಸ್ಥಾನ ಫೈನಲ್ ತಲುಪಲೂ ಸಾಧ್ಯವಾಗದೇ ಇದ್ದರೂ ತಂಡದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಎಲ್ಲರ ಮನ ಗೆದ್ದಿದ್ದಾರೆ. ಬಾಲಿವುಡ್ ಸ್ಟಾರ್ ಬಿಗ್ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ಸಹ ಫಿದಾ ಆಗಿದ್ದು ಡೇರಿಂಗ್ ಆಂಡ್ ಡ್ಯಾಶಿಂಗ್ ವೈಭವ್ ಕುರಿತು ಪ್ರಮುಖ ಹೇಳಿಕೆ ನೀಡಿದ್ದಾರೆ. ನ್ಯೂ ಚಂಡೀಗಢದ ಮುಲ್ಲನ್ಪುರದಲ್ಲಿ ನಡೆದ ಪಂದ್ಯದಲ್ಲಿ, ಶುಭಮನ್ ಗಿಲ್ ಅವರ ಶತಕ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ 18.4 ಓವರ್ಗಳಲ್ಲಿ 215 ರನ್ಗಳ ಬೃಹತ್ ಗುರಿಯನ್ನು ತಲುಪಿತು ಎನ್ನಲಾಗಿದೆ.
ಈ ಪಂದ್ಯ ರಾಜಸ್ಥಾನ ಸೋತರು ಬಿಹಾರ ಮೂಲದ 15 ವರ್ಷ ವಯಸ್ಸಿನ ಕ್ರಿಕೆಟರ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕವೇ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ 2ರಲ್ಲಿ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಘರ್ಜಿಸಿದರು. ಕೇವಲ 47 ಎಸೆತಗಳಲ್ಲಿ 96 ರನ್ಗಳ ಆಕರ್ಷಕ ಇನ್ನಿಂಗ್ಸ್ ಆಡಿದ್ದ ಅವರು ಕೇವಲ 4 ರನ್ಗಳಿಂದ ಶತಕ ವಂಚಿತರಾದರು. ವೈಭವ್ರ ಅದ್ಭುತ ಇನ್ನಿಂಗ್ಸ್ ಹೊರತಾಗಿಯೂ ರಾಜಸ್ಥಾನ್ ತಂಡ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ತಂಡ ಸೋಲುತ್ತಿದ್ದಂತೆ ವೈಭವ್ ಭಾವುಕರಾಗಿದ್ದರು. ಆದಾಗ್ಯೂ ಮೈದಾನದಲ್ಲಿ ಅವರ ಭರ್ಜರಿ ಆಟ ಅಭಿಮಾನಿಗಳು, ಕ್ರಿಕೆಟ್ ಲೆಜೆಂಟ್ಸ್ ಮತ್ತು ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಅವರಿಂದಲೂ ಪ್ರಶಂಸೆ ಗಳಿಸಿತು.
ಹಾಗಾಗಿ ಈ ಸೀಸನ್ನಲ್ಲಿ ಯುವ ಕ್ರಿಕೆಟಿಗನ ಗಮನಾರ್ಹ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಅಮಿತಾಭ್ ಬಚ್ಚನ್, ‘ಎಕ್ಸ್’ನಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಹಂಚಿಕೊಂಡರು. ಸೂರ್ಯವಂಶಿಯನ್ನು “ಅದ್ಭುತ” ಪ್ರತಿಭೆ ಎಂದು ಬಣ್ಣಿಸಿದ ಬಿಗ್ಬಿ, ಹದಿಹರೆಯದವ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗೈದಿದ್ದಕ್ಕಾಗಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. “ಟಿ 5756(i) – ಸೂರ್ಯವಂಶಿ – 15 ವರ್ಷದ ಅದ್ಭುತ. ಆ ವಯಸ್ಸಿನಲ್ಲಿ, ನನಗೆ ಗೋಲಿ ಅಲ್ಲ ಗಿಲ್ಲಿ ದಾಂಡು ಸಹ ಆಡಲು ಬರುತ್ತಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ. ಇದಲ್ಲದೇ ತಂಡದ ನಾಯಕ ರಿಯಾನ್ ಪರಾಗ್ ಸಹಾ ವೈಭವ್ ಆಟವನ್ನು ಗುಣಗಾನ ಮಾಡಿದ್ದಾರೆ ಎನ್ನಲಾಗಿದೆ.

















