ಚೆನ್ನೈ (ತಮಿಳುನಾಡು): ಐಪಿಎಲ್ನ ಅಂತಿಮ ಪಂದ್ಯ ವೀಕ್ಷಣೆ ವೇಳೆ ನಡೆದ ದುರಂತದಲ್ಲಿ ಉತ್ತರ ಭಾರತದ ವಲಸಿಗ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದ್ದು ಭಾನುವಾರ ಆರ್ಸಿಬಿ ಮತ್ತು ಗುಜರಾತ್ನ ನಡುವಿನ ಅಂತಿಮ ಪಂದ್ಯದ ಹಿನ್ನೆಲೆಯಲ್ಲಿ ಈ ಪಂದ್ಯ ವೀಕ್ಷಣೆಗೆ ಚೆನ್ನೈನ ರಾಮಪುರಂ ಬಳಿಯ ಶಾಂತಿ ನಗರ ಮುಖ್ಯ ರಸ್ತೆಯಲ್ಲಿರುವ ಖಾಸಗಿ ನಿರ್ಮಾಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಮುಂದಾಗಿದ್ದಾರೆ. ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಈ ಕಾರ್ಮಿಕರಿಗೆ ವಸತಿ ಸೌಕರ್ಯ ಕಲ್ಪಿಸಲು ಎಂಟು ಕಬ್ಬಿಣದ ಶೆಡ್ಗಳನ್ನು ನಿರ್ಮಿಸಲಾಗಿತ್ತು. ಇಲ್ಲಿಯೇ ಅವರಯ ಭಾನುವಾರದ ಐಪಿಎಲ್ ಪಂದ್ಯದ ಹಿನ್ನೆಲೆ 35 ಕಾರ್ಮಿಕರು ಪಂದ್ಯ ವೀಕ್ಷಣೆಗೆ ಮುಂದಾಗಿದ್ದರು ಎನ್ನಲಾಗಿದೆ.
ಹಾಗೂ ಈ ವೇಳೆ ಕಬ್ಬಿಣದ ಮೇಲ್ಚಾವಣಿ ಕುಸಿದು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ 35 ಕಾರ್ಮಿಕರು ಗಾಯಗೊಂಡಿದ್ದಾರೆ. ಪಂದ್ಯ ವೀಕ್ಷಣೆ ವೇಳೆ ಕಬ್ಬಿಣದ ಮೇಲ್ಚಾವಣಿ ಕುಸಿದು ಅವರ ಮೇಲೆ ಅಪ್ಪಳಿಸಿತು. ಈ ಭೀಕರ ಅಪಘಾತದಲ್ಲಿ ಎಲ್ಲಾ 35 ಕಾರ್ಮಿಕರಿಗೆ ತೀವ್ರ ಗಾಯಗಳಾಗಿವೆ. ಮಾಹಿತಿ ತಿಳಿದ ಕೂಡಲೇ ಮೌಂಟ್ ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಇಲಾಖೆ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು. ತಕ್ಷಣಕ್ಕೆ ಗಾಯಗೊಂಡ ಗಾಯಳುಗಳನ್ನುಕಲೈನಾರ್ ಸೆಂಟೆನರಿ ಆಸ್ಪತ್ರೆ ಮತ್ತು ರಾಮಚಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ 23 ವ್ಯಕ್ತಿಗಳು ಪ್ರಸ್ತುತ ಕಲೈನಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಬ್ರಿಜ್ಜು ಮನ್ಸಿ ಎಂಬ 25 ವರ್ಷದ ಜಾರ್ಖಂಡ್ ಮೂಲದ ಕಾರ್ಮಿಕ ತಲೆಗೆ ಗಂಭೀರವಾದ ಗಾಯಗಳಾಗಿವೆ. ಚಿಕಿತ್ಸೆ ವೇಳೆ ಆತ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.
ಮತ್ತು ಜೊತೆಗೆ ಮತ್ತೊಬ್ಬ ಕೋಲ್ಕತ್ತಾ ಮೂಲದ ಕಾರ್ಮಿಕ ಸುಗನಿ ಪರಿಸ್ಥಿತಿ ಗಂಭೀರಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ನಂದಂಬಕ್ಕಂ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಘಟನೆಯ ಪ್ರಾಥಮಿಕ ತನಿಖೆಯಲ್ಲಿ ವಲಸೆ ಕಾರ್ಮಿಕರಿಗಾಗಿ ವಸತಿ ಪ್ರದೇಶವನ್ನು ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ, ಕಬ್ಬಿಣದ ಛಾವಣಿಯು ರಚನಾತ್ಮಕವಾಗಿ ದುರ್ಬಲವಾಗಿದ್ದು, ಅದು ಕುಸಿದು ಬೀಳಲು ಕಾರಣವೇನು, ವಸತಿ ಸೌಲಭ್ಯವನ್ನು ನಿರ್ಮಿಸಲು ಜವಾಬ್ದಾರರಾಗಿರುವ ಗುತ್ತಿಗೆದಾರರು ಯಾರು ಮತ್ತು ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂಬಂತಹ ಹಲವಾರು ಪ್ರಮುಖ ಅಂಶಗಳ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

















