ಮನೆ ಅಪರಾಧ ಕಾರಾಗೃಹದ ಕೈದಿಗೆ ಚಿಕನ್ ಪೀಸ್ ನಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಕಾರಾಗೃಹದ ಕೈದಿಗೆ ಚಿಕನ್ ಪೀಸ್ ನಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

0

ವಿಜಯಪುರ(Vijayapura): ದರ್ಗಾ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗೆ ಚಿಕನ್‌ ಪೀಸ್‌ನಲ್ಲಿ ಗಾಂಜಾ ಅಡಗಿಸಿಟ್ಟು ಪೂರೈಕೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೈಲಿನಲ್ಲಿರುವ ಕೈದಿಗೆ ನೀಡಲು ತೆಗೆದುಕೊಂಡು ಹೋಗಿದ್ದ ಊಟವನ್ನು ಪರಿಶೀಲಿಸುವಾಗ ಚಿಕನ್ ಪೀಸ್ ಒಳಗೆ ಗಾಂಜಾವನ್ನು ಹುದುಗಿಸಿಟ್ಟಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಕೈದಿ ಶಾರುಕ್ ಖಾನ್ ತೊಗರಿತಿಪ್ಪಿ ಎಂಬಾತನಿಗೆ ಪ್ರಜ್ವಲ್ ಎಂಬಾತ ಊಟದೊಂದಿಗೆ ಗಾಂಜಾ ಪೂರೈಕೆ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.

ದೊಡ್ಡ, ದೊಡ್ಡ ಚಿಕನ್ ಪೀಸ್‌ನಲ್ಲಿ 2 ಗ್ರಾಂನಷ್ಟು ಇರುವ ಗಾಂಜಾ ಇರಿಸಲಾಗಿತ್ತು. ಒಟ್ಟು 18 ಗಾಂಜಾ ಪ್ಯಾಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ವಿರುದ್ಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.