ಅಗ್ನಿ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಈ ಸಂಬಂಧ ಸಂಸ್ಥೆ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಮಂಡ್ಯ, ರಾಮನಗರ, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ಕಡೆ ಮಾರಾಟ ಅಧಿಕಾರಿಗಳು ಮತ್ತು ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸೂಕ್ಯುಟಿವ್ಗಳ ನೇಮಕಾತಿಗೆ ಮುಂದಾಗಿದೆ. ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಜೊತೆಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಈ ಹುದ್ದೆಗಳಿಗೆ ಆಗಸ್ಟ್ 27ರ ಶನಿವಾರ ವಾಕ್ ಇನ್ ಇಂಟರ್ವ್ಯೂ ನಡೆಯಲಿದೆ.
ಸಂಸ್ಥೆ: ಅಗ್ನಿ ಸ್ಟೀಲ್ ಪ್ರೈವೇಟ್ ಲಿಮಿಟೆಡ್
ಹುದ್ದೆಗಳು: ಮಾರ್ಕೆಟಿಂಗ್ ಮ್ಯಾನೇಜರ್, ಸೇಲ್ಸ್ ಆಫೀಸರ್, ಬ್ಯುಸಿನೆಟ್ ಡೆವಲಪ್ಮೆಂಟ್ ಎಕ್ಸೂಕ್ಯೂಟಿವ್
ಒಟ್ಟು ಹುದ್ದೆಗಳ ಸಂಖ್ಯೆ: ನಿರ್ಧಿಷ್ಟ ಪಡಿಸಿಲ್ಲ
ಕಾರ್ಯ ನಿರ್ವಹಣೆ ಸ್ಥಳ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ನಗರ
ವೇತನ: ಸಂಸ್ಥೆಯ ನಿಯಮ ಅನುಸಾರ
ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ
ನೇರ ಸಂದರ್ಶನ ನಡೆಯುವ ಸ್ಥಳ: ಹೋಟೇಲ್ ಪೈ ವಿಸ್ತಾ, ಬೆಂಗಳೂರು ನೀಲಿಗಿರಿ ರಸ್ತೆ. ಮೈಸೂರು.
ಅಧಿಸೂಚನೆ ಬಿಡುಗಡೆ ದಿನಾಂಕ: 22 ಆಗಸ್ಟ್ 2022
ನೇರ ಸಂದರ್ಶನ ದಿನಾಂಕ 27 ಆಗಸ್ಟ್ ಬೆಳಗ್ಗೆ 10 ಕ್ಕೆ
ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ
ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ಅರ್ಜಿಯನ್ನು ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
ಪದವಿ ಮತ್ತು 10ನೇ ತರಗತಿ ಮಾರ್ಕ್ಸ್ ಕಾರ್ಡ್
ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
ಜಾತಿ ಪ್ರಮಾಣ ಪತ್ರ
ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ
ಹೆಚ್ಚಿನ ಮಾಹಿತಿಗೆ 9686667664, 7094470026 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.