ಮನೆ ಅಪರಾಧ ಡಿವೈಡರ್’ಗೆ  ಬೈಕ್ ಡಿಕ್ಕಿ: ಯುವತಿ ಸ್ಥಳದಲ್ಲೇ ಸಾವು, ತುಂಡಾದ ಯುವಕನ ಕೈ

ಡಿವೈಡರ್’ಗೆ  ಬೈಕ್ ಡಿಕ್ಕಿ: ಯುವತಿ ಸ್ಥಳದಲ್ಲೇ ಸಾವು, ತುಂಡಾದ ಯುವಕನ ಕೈ

0

ಬೆಂಗಳೂರು(Bengaluru): ಡಿವೈಡರ್’ಗೆ ಬೈಕ್ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವಕನ ಕೈ ತುಂಡಾಗಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸನಾ ಸಾಹಿಬಾ (18) ಮೃತ ದುರ್ದೈವಿ.  ಸ್ನೇಹಿತ ಜಿಶಾನ್’ನ ಬಲಗೈ ತುಂಡಾಗಿ ಗಂಭೀರವಾಗಿ ಗಾಯಗೊಂಡಿದ್ದು,  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಇಬ್ಬರೂ ಆರ್.ಟಿ.ನಗರದ ನಿವಾಸಿಗಳಾಗಿದ್ದು, ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜಿಶಾನ್​ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗೆಳತಿಯನ್ನು ಕೂರಿಸಿಕೊಂಡು ಡ್ಯೂಕ್ ಬೈಕ್​ನಲ್ಲಿ ದೇವನಹಳ್ಳಿ ಕಡೆ ಹೋಗುತ್ತಿದ್ದಾಗ, ಜಕ್ಕೂರು ಮೇಲ್ಸೇತುವೆ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಅಪಘಾತದ ರಭಸಕ್ಕೆ ಯುವತಿ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಜಿಶಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಯಲಹಂಕ ಸಂಚಾರ ಪೊಲೀಸರು ತಿಳಿಸಿದ್ದಾರೆ.